ಕುಂದಾಪುರ: ಸಬ್ ಕೊ ಸನ್ಮತಿ ದೇ ಭಗವಾನ್ ಎಂದು ಜಗತ್ತಿಗೆ ಸಾರಿದ ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ಈ ನಾಡಿನ ಸಾಮರಸ್ಯದ ಬದುಕಿನ ಉಳಿವಿಗಾಗಿ ಕುಂದಾಪುರದ ಸಮಾನ ಮನಸ್ಕರು ಸಾಮರಸ್ಯ ನಡಿಗೆ ಮತ್ತು ಮೊಂಬತ್ತಿ ಬೆಳಕಿನಲ್ಲಿ ಸಭೆಯನ್ನು ಆಯೋಜಿಸಿದ್ದಾರೆ.
ಅಕ್ಟೋಬರ್ 2 ರ ಭಾನುವಾರ ಸಂಜೆ 5.30ಕ್ಕೆ *ಸಾಮರಸ್ಯ ನಡಿಗೆ* ಶಾಸ್ತ್ರಿ ವೃತ್ತದಿಂದ ಹೊರಟು ಪಾರಿಜಾತ ಸರ್ಕಲ್‌ನಿಂದ ತಿರುಗಿ ಪುನಃ ಶಾಸ್ತ್ರಿ ಸರ್ಕಲ್ ಬಳಿ ಬಂದು ಸಮಾಪ್ತಿಗೊಳ್ಳಲಿದೆ. ಬಳಿಕ ಶಾಸ್ತ್ರಿವೃತ್ತದ ಪೊಲೀಸ್ ಚೌಕಿಯ ಬಳಿ ಮೊಂಬತ್ತಿ ಬೆಳಕಿನಲ್ಲಿ ಸಾಮರಸ್ಯ ಸಭೆ ನಡೆಯಲಿದೆ.
ಹಿರಿಯ ಚಿಂತಕ ಮತ್ತು ಕವಿ ವಸಂತ ಬನ್ನಾಡಿ ಮತ್ತು ಖ್ಯಾತ ರಂಗಕರ್ಮಿ ಸಂತೋಷ್ ನಾಯಕ್ ಪಟ್ಲ ಹಾಗೂ ಇತರ ಗಣ್ಯರು ಮಾತನಾಡಲಿದ್ದಾರೆ. ಗಾಂಧಿ ಗೀತೆಗಳ ಗಾಯನವೂ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Kshetra Samachara
01/10/2022 12:07 pm