ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ. ಜಿಲ್ಲೆಯ ಸಂಸದ, ಶಾಸಕರೇ ಮೌನ ಮುರಿದು ಉತ್ತರಿಸಿ; ಎಂ.ಜಿ ಹೆಗಡೆ

ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ವಸೂಲಿ ಕೇಂದ್ರದ ವಿರುದ್ಧ ಕಳೆದ ಹಲವಾರು ವರ್ಷಗಳಿಂದ ನಿರಂತರ ಹೋರಾಟದ ಮೂಲಕ ಪ್ರಬಲ ವಿರೋಧ ವ್ಯಕ್ತವಾಗುತ್ತಿದ್ದರೂ ಸಂಸದ ನಳಿನ್ ರಾಗಲಿ, ಶಾಸಕರುಗಾಗಲಿ ಯಾರೂ ಮಾತನಾಡದೆ ಮೌನವಹಿಸುತ್ತಿದ್ದಾರೆ. ಆದ್ದರಿಂದ ಸುರತ್ಕಲ್ ನ ಅಕ್ರಮ ಟೋಲ್ ಗೇಟ್ ಬಗ್ಗೆ ಜನಪ್ರತಿನಿಧಿಗಳು ಮೌನ ಮುರಿದು ಉತ್ತರಿಸಬೇಕು ಎಂದು ಜನಪರ ಹೋರಾಟಗಾರ ಎಂ.ಜಿ ಹೆಗಡೆ ಆಗ್ರಹಿಸಿದರು.

ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ನೇರ ಕಾರ್ಯಾಚರಣೆ, ಮುತ್ತಿಗೆ ಕಾರ್ಯಕ್ರಮದ ಪ್ರಚಾರವಾಗಿ ಇಂದು ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಲೇಡಿಗೋಶನ್ ವರೆಗೆ ಪಾದಯಾತ್ರೆ ನಡೆಯಿತು.

ಈ ವೇಳೆ ಮಾತನಾಡಿದ ಅವರು, ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸುವ ಕುರಿತು ವ್ಯಾಪಕ ತಯಾರಿಗಳು, ಚರ್ಚೆಗಳು ನಡೆಯುತ್ತಿದೆ. ಆದರೆ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರುಗಳಾದ ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ್ ಕಾಮತ್ ಜನರ ಬೇಡಿಕೆಗೆ ಸ್ಪಂದಿಸದೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾರೆ.

ಈ ಮೌನವನ್ನು ಮುರಿಯಲು ಅಕ್ಟೋಬರ್ 18ರಂದು ನಡೆಯುವ ಐತಿಹಾಸಿಕ ಹೋರಾಟ ಸಾಕ್ಷಿಯಾಗಬೇಕು. ಅಂದು ನಡೆಯುವ ಟೋಲ್ ಗೇಟ್ ಮುತ್ತಿಗೆಗೆ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.

Edited By : Nagesh Gaonkar
Kshetra Samachara

Kshetra Samachara

10/10/2022 09:09 pm

Cinque Terre

4.28 K

Cinque Terre

2

ಸಂಬಂಧಿತ ಸುದ್ದಿ