ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ವಕ್ಫ್ ಬೋರ್ಡ್ ನಿಷೇಧಿಸಿ : ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆ

ಪುತ್ತೂರು: ದೇಶದಲ್ಲಿ ಕಾರ್ಯಾಚರಿಸುತ್ತಿರುವ ವಕ್ಘ್ ಬೋರ್ಡ್ ಮತ್ತು ವಕ್ಘ್ ಕಾನೂನನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಅಕ್ಟೋಬರ್ 10 ರಂದು ಪುತ್ತೂರಿನ ಅಮರ್ ಜವಾನ್ ಜ್ಯೋತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಹಿಂದೂ ಸಂಘಟನೆಗಳ ಮುಖಂಡ ದಿನೇಶ್ ಜೈನ್ ದೇಶದ ಅತೀ ಹೆಚ್ಚು ಭೂಮಿ ಮೊದಲಿಗೆ ರೈಲ್ವೇ ಇಲಾಖೆ, ಎರಡನೇಯದು ಭಾರತೀಯ ಸೇನೆಯಲ್ಲಿ ಮತ್ತು ಮೂರನೇಯದು ವಕ್ಫ್ ಬೋರ್ಡ್.

ದೇಶದ ಸ್ವಾತಂತ್ರ್ಯಾನಂತರದ ಅಸ್ತಿತ್ವದ ಬಂದ ವಕ್ಫ್ ಬೋರ್ಡ್ ನಡಿ ದೇಶದ ಬಹುಪಾಲ ಭೂಮಿಯಿದ್ದು,ದೇಶವನ್ನಾಳಿದ ಸರಕಾರಗಳ ನೀತಿಯೇ ಇದಕ್ಕೆ ಕಾರಣ. ತಮಿಳುನಾಡಿದ 2000 ಕ್ಕೂ ಮಿಕ್ಕಿದ ವರ್ಷಗಳ ಹಳೆಯ ದೇವಸ್ಥಾನದ ಭೂಮಿ ವಕ್ಫ್ ಬೋರ್ಡಿಗೆ ಸಂಬಂಧಪಟ್ಟಿರುವುದು ಎನ್ನುವ ವಿಚಾರ ತಿಳಿದಾದ ದೇಶದಲ್ಲಿ ಯಾವ ರೀತಿಯಲ್ಲಿ ಲ್ಯಾಂಡ್ ಜಿಹಾದ್ ನಡೆಯುತ್ತಿದೆ ಎನ್ನುವುದನ್ನು ಊಹಿಸಬಹುದಾಗಿದೆ.

ದೇಶದ ಜನ ಈ ವಿಚಾರವನ್ನು ಗಂಭೀರವಾಗಿ ತೆಗೆಯದೇ ಹೋದಲ್ಲಿ ಜನ ಮುಂದಿನ ದಿನಗಳಲ್ಲಿ ಸಂಕಷ್ಟವನ್ನು ಎದುರಿಸಬೇಕಾದೀತು ಎಂದು ಅವರು ಎಚ್ಚರಿಸಿದರು.

Edited By : Manjunath H D
Kshetra Samachara

Kshetra Samachara

10/10/2022 04:33 pm

Cinque Terre

7.8 K

Cinque Terre

1

ಸಂಬಂಧಿತ ಸುದ್ದಿ