ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಸಚಿವರಿದ್ದರೂ ಸುಳ್ಯದ ಸಮಸ್ಯೆಗಳ ಬಗ್ಗೆ ಉಳ್ಳಾಳದ ಶಾಸಕರು ಮಾತಾಡುವಂತಾಗಿದೆ: ಭರತ್ ಮುಂಡೋಡಿ ವಾಗ್ದಾಳಿ

ಸುಳ್ಯ: ಈ ಬಾರಿಯ ಮಳೆ ಹಾನಿ ಮತ್ತು ಪ್ರಾಕೃತಿಕ ವಿಕೋಪದಿಂದಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಹಾನಿ ಉಂಟಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಆದರೆ ಹಾನಿಯಾದ ಪ್ರದೇಶಗಳ ಪುನರ್ ನಿರ್ಮಾಣಕ್ಕೆ, ನಷ್ಟ ಉಂಟಾದವರಿಗೆ ಪರಿಹಾರ ನೀಡುವುದರಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ ಹೇಳಿದ್ದಾರೆ.

ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯದ ಶಾಸಕರಾದ ಎಸ್.ಅಂಗಾರ ಸಚಿವರಾಗಿದ್ದರೂ ಸುಳ್ಯ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮತ್ತು ಭೂ ಕಂಪನದಲ್ಲಿ ಮನೆ ಹಾನಿ ಉಂಟಾದವರಿಗೆ ಪರಿಹಾರ ದೊರಕಿಸುವ ಬಗ್ಗೆ ಉಳ್ಳಾಳದ ಶಾಸಕರಾದ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಮಾತನಾಡಬೇಕಾಗಿ ಬಂದಿದೆ. ಸುಳ್ಯ ಶಾಸಕರು ಹಾಗು ಸಚಿವರಾದ ಅಂಗಾರರು ಸುಳ್ಯದ ಸಮಸ್ಯೆಗಳ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾಪಿಸದೇ ಇರುವುದು ದುರದೃಷ್ಠಕರ. ಹಾಗಾದರೆ ಸುಳ್ಯಕ್ಕೆ ಜನ ಪ್ರತಿನಿಧಿ ಇದ್ದಾರಾ ಎಂದು ಪ್ರಶ್ನೆ ಮಾಡಬೇಕಾಗಿ ಬಂದಿದೆ. ಹಾನಿಯ ನಷ್ಟ ಲೆಕ್ಕ ಹಾಕಿ ಮುಖ್ಯಮಂತ್ರಿಯವರಲ್ಲಿ ಮಾತನಾಡಿ ಕ್ಷೇತ್ರಕ್ಕೆ ಕನಿಷ್ಠ ಒಂದು ಸಾವಿರ ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಸಬೇಕಾಗಿತ್ತು. ಆದರೆ ಮುಖ್ಯಮಂತ್ರಿ, ಇತರ ಎಲ್ಲಾ ಸಚಿವರು ಇಲ್ಲಿಗೆ ಬಂದರೂ ಯಾವುದೇ ಪರಿಹಾರ ದೊರಕಿಲ್ಲ.ಈ ಸರಕಾರದ ಪರಿಹಾರಗಳೆಲ್ಲ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗುತಿದೆ, ಯಾವುದೂ ಅನುಷ್ಠಾನ ಆಗುತ್ತಿಲ್ಲ. ಸಂಪೂರ್ಣ ಮನೆ ನಷ್ಟ ಅದವರಿಗೆ 5 ಲಕ್ಷ ಪರಿಹಾರ ನೀಡುವುದಾಗಿ ಸಚಿವರು ಘೋಷಿಸಿದರೂ ಯಾರಿಗೂ ಸಿಗಲಿಲ್ಲ ಎಂದು ಭರತ್ ಮುಂಡೋಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್‌.ಗಂಗಾಧರ, ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಮಹಮ್ಮದ್‌ ಕುಂಞಿಗೂನಡ್ಕ, ಸದಾನಂದ‌ ಮಾವಜಿ, ಧೀರಾ ಕ್ರಾಸ್ತಾ, ಎಂ.ಎಚ್.ಸುರೇಶ್, ಸಚಿನ್‌ರಾಜ್ ಶೆಟ್ಟಿ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

27/09/2022 10:52 pm

Cinque Terre

9.52 K

Cinque Terre

0

ಸಂಬಂಧಿತ ಸುದ್ದಿ