ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಬಿಜೆಪಿ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮುಖ್ಯ; ಜಿ.ಎನ್ ನಾಗರಾಜ್ ವಾಗ್ದಾಳಿ

ಮೂಡುಬಿದಿರೆ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಜನವಿರೋಧಿ, ದೇಶವಿರೋಧಿ ಆಡಳಿತವನ್ನು ವಿರೋಧಿಸಿ ಮತ್ತು ವಿಪರೀತ ಬೆಲೆ ಏರಿಕೆಯನ್ನು ಖಂಡಿಸಿ ಸಿ.ಪಿ.ಐ.ಎಂನ ತಾಲೂಕು ಸಮಿತಿ ವತಿಯಿಂದ ಇಂದು ಆಡಳಿತ ಸೌಧದ ಮುಂಭಾಗದಲ್ಲಿ ಪ್ರಚಾರಾಂದೋಲನ ನಡೆಯಿತು.

ಸಿ.ಪಿ.ಐ.ಎಂನ ರಾಜ್ಯ ಸಮಿತಿಯ ಸದಸ್ಯ ಜಿ.ಎನ್ ನಾಗರಾಜ್ ಪ್ರಚಾರಾಂದೋಲನವನ್ನು ಉದ್ದೇಶಿಸಿ ಮಾತನಾಡಿ ನಿರುದ್ಯೋಗ, ಹಣದುಬ್ಬರ, ದೇಶದ ಸಂಪತ್ತಿನ ಲೂಟಿ ಮತ್ತು ಭ್ರಷ್ಟಾಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಾಜ್ಯ ಮತ್ತು ಕೇಂದ್ರವನ್ನು ಆಡಳಿತ ಮಾಡುವ ಬಿಜೆಪಿ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮುಖ್ಯ ಜನರ ಬದುಕನ್ನು ಸುಧಾರಿಸುವುದಾಗಲಿ, ಉತ್ತಮಪಡಿಸಬೇಕೆಂಬ ಉದ್ದೇಶ ಅವರಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೋದಿ ಸರ್ಕಾರವು ಎಲ್ಲವನ್ನೂ ಖಾಸಗೀಕರಣಗೊಳಿಸಿ ಅದಾನಿ, ಅಂಬಾನಿಯಂತಹ ದೊಡ್ಡ ಉದ್ಯಮಿಗಳಿಗೆ ನೀಡಿ, ಅವರುಗಳು ಲಾಭ ಪಡೆಯುವಂತಾಗಿದೆ ಎಂದರು. ಬೆಲೆ ಏರಿಕೆಯ ವಿರುದ್ಧ ತಿರುಗೇಟು ನೀಡಲು ಇರುವ ಒಂದೇ ಒಂದು ಮಾರ್ಗ ಪ್ರತಿಭಟನೆ. ಬೆಲೆ ಏರಿಕೆಯಿಂದಾಗಿ ಯಾರೆಲ್ಲಾ ಕಷ್ಟಪಡುತ್ತಿದ್ದರೋ ಅವರನ್ನೆಲ್ಲಾ ಬೀದಿಗಿಳಿಸಿ ಪ್ರತಿಭಟನೆಯನ್ನು ನಡೆಸಬೇಕೆಂದು ಕರೆ ಕೊಟ್ಟರು.

Edited By : Nagesh Gaonkar
Kshetra Samachara

Kshetra Samachara

27/09/2022 09:07 am

Cinque Terre

6.78 K

Cinque Terre

1

ಸಂಬಂಧಿತ ಸುದ್ದಿ