ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಉತ್ತರಕ್ಕೆ ಸಿಕ್ಕಿತೇ ಮಂಗಳೂರು ಮೇಯರ್ ಗಿರಿ!?

ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಸೆ.9ರಂದು ಚುನಾವಣೆ ನಡೆಯಲಿದ್ದು ಮೇಯರ್ ಗಿರಿ ಯಾರಿಗೆ ಒಲಿಯಲಿದೆ ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಈ ಬಾರಿಯಾದರೂ ಮೇಯರ್ ಗಿರಿ ಉತ್ತರಕ್ಕೆ ಲಭಿಸೀತು ಎಂಬ ನಿರೀಕ್ಷೆಯಲ್ಲಿ ಉತ್ತರದ ಹಿರಿ ಕಿರಿಯ ಪಾಲಿಕೆ ಸದಸ್ಯರಿದ್ದಾರೆ. ಆದರೆ ಈ ಮಧ್ಯೆ ಮೇಯರ್ ಕುರ್ಚಿ ಮೇಲೆ ಕಣ್ಣು ಹಾಕಿರುವ ದಕ್ಷಿಣದ ಸುಧೀರ್ ಶೆಟ್ಟಿ ಕಣ್ಣೂರು ರವರು ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನಮಾನ ಪಡೆದಿದ್ದರೂ ಮೇಯರ್ ಕುರ್ಚಿಯ ಮೇಲೆ ಕಣ್ಣಿಟ್ಟಿರುವುದು ಪಾಲಿಕೆ ಕಾರ್ಪೋರೇಟರ್ ಗಳಲ್ಲಿ ಇವರ ಅಸಮಾಧಾನ ಉಂಟಾಗಿದೆ

ಈ ಹಿಂದೆ ತನ್ನ ಬರ್ತ್ ಡೇ ಹೆಸರಲ್ಲಿ ಪಾಲಿಕೆ ಸದಸ್ಯರಿಗೆ "ಬಾಡೂಟ" ಏರ್ಪಡಿಸಿದ್ದ ಸುಧೀರ್ ಶೆಟ್ಟಿ ಯವರ ಬಗ್ಗೆ ಪಾಲಿಕೆ ಸದಸ್ಯರಲ್ಲೇ ಅಸಮಾಧಾನವಿದೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಸ್ಮಾರ್ಟ್ ಸಿಟಿ ನಿರ್ದೇಶಕರಾಗಿ, ಮಂಗಳೂರು ಪಾಲಿಕೆ ಮುಖ್ಯ ಸಚೇತಕರಾಗಿ ಇವರು ಹುದ್ದೆ ನಿಭಾಯಿಸುತ್ತಿದ್ದಾರೆ. ಹೀಗಿರುವಾಗ ಮತ್ತೆ ಮೇಯರ್ ಗಿರಿಯೂ ಅವರಿಗೇ ಸಿಗುವುದಾದರೆ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಇಲ್ಲವೇ? ಎಂಬ ಪ್ರಶ್ನೆ ಉದ್ಭವವಾಗಿದೆ.

ಪಾಲಿಕೆ ಮೇಯರ್ ಆಯ್ಕೆಯಲ್ಲಿ ಬಿಲ್ಲವ ಸಮುದಾಯಕ್ಕೆ ನ್ಯಾಯ ಸಿಗಬೇಕಿದ್ದು ಮಧ್ಯೆ ಮತ್ತೊಮ್ಮೆ ಬಂಟ ಸಮುದಾಯದ ನಾಯಕನಿಗೆ ಪಾಲಿಕೆ ಪಟ್ಟ ಕಟ್ಟಲು ತೆರೆಮರೆಯಲ್ಲಿ ಸಿದ್ಧತೆ ನಡೆದಿರುವುದು ಬಿಲ್ಲವ ಕಾರ್ಪೋರೇಟರ್ ಗಳ ಕಣ್ಣು ಕೆಂಪಗಾಗಿಸಿದೆ.

ಪಾಲಿಕೆ ಆಡಳಿತ ಚುಕ್ಕಾಣಿ ಬಿಜೆಪಿಗೆ ಸಿಕ್ಕಿದ ಬಳಿಕ ಮೊದಲನೇ ಅವಧಿಗೆ ದಿವಾಕರ ಪಾಂಡೇಶ್ವರ ಅವರು ಮೇಯರ್ ಆದರು. 2ನೇ ಅವಧಿಗೆ ಬಂಟ ಸಮುದಾಯದ ಪ್ರೇಮಾನಂದ ಶೆಟ್ಟಿ ಅಧಿಕಾರ ನಡೆಸುತ್ತಿದ್ದಾರೆ. ಆರಂಭದ ಎರಡೂ ವರ್ಷಗಳು ಮೇಯರ್ ಸ್ಥಾನಗಳು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಾಲಾದರೆ ಈ ಬಾರಿ ಮೇಯರ್ ಸ್ಥಾನ ಅರ್ಹವಾಗಿಯೇ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಿಗಬೇಕಿದೆ. ಕಳೆದ ಬಾರಿ ಮೇಯರ್ ಸ್ಥಾನ ಬಂಟ ಸಮುದಾಯಕ್ಕೆ ದೊರೆತು ಅದರಂತೆ ಪ್ರೇಮಾನಂದ ಶೆಟ್ಟಿ ಆ ಸ್ಥಾನ ಅಲಂಕರಿಸಿದರು. ಈ ಬಾರಿ ಮೇಯರ್ ಸ್ಥಾನ ನ್ಯಾಯವಾಗಿ ಬಿಲ್ಲವ ಸಮಾಜದ ಮುಖಂಡರಿಗೆ ಸಿಗಬೇಕಿದೆ.

ಪಾಲಿಕೆಯ ಹಿರಿಯ ಸದಸ್ಯ ಜಯಾನಂದ ಅಂಚನ್ ಆಕಾಂಕ್ಷಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ರೇಸ್ ನಲ್ಲಿ ಜಯಾನಂದ್ ಹೆಸರು ಕೇಳಿಬರುತ್ತಿದ್ದಂತೆ ಉತ್ತರದ ಕಾರ್ಪೋರೇಟರ್ ಗಳು ಹಿರಿಯ ನಾಯಕನಿಗೆ ಮನ್ನಣೆ ಸಿಕ್ಕರೆ ಒಳ್ಳೆಯದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Edited By : Vijay Kumar
Kshetra Samachara

Kshetra Samachara

07/09/2022 10:40 pm

Cinque Terre

3.51 K

Cinque Terre

0

ಸಂಬಂಧಿತ ಸುದ್ದಿ