ಕುಂದಾಪುರ: ಆಗಸ್ಟ್ 8ರಂದು ಚಪ್ಪರಿಕೆ ಎಂಬಲ್ಲಿ ಕಾಲುಸಂಕದಿಂದ ಬಿದ್ದು ಸಾವನ್ನಪ್ಪಿದ್ದ ಬೋಳಂಬಳ್ಳಿ ಮಕ್ಕಿಮನೆ ಬೈಂದೂರು ತಾಲೂಕಿನ ಬೋಳಂಬಳ್ಳಿ ಗ್ರಾಮದ ಮಕ್ಕಿಮನೆ ನಿವಾಸಿ ಪ್ರದೀಪ್ ಪೂಜಾರಿ ಮತ್ತು ಸುಮಿತ್ರಾ ದಂಪತಿಯ ಪುತ್ರಿ ಸನ್ನಿಧಿ(8) ಮನೆಗೆ ಸಂಸದ ಬಿ.ವೈ ರಾಘವೇಂದ್ರ ಭೇಟಿ ನೀಡಿದರು.
ಸನ್ನಿಧಿ ಮನೆಗೆ ಭೇಟಿ ನೀಡಿದ ಸಂಸದ, ಮೃತ ಮಗುವಿನ ಪೋಷಕರಿಗೆ ಧೈರ್ಯ ತುಂಬಿ, ವೈಯುಕ್ತಿಕವಾಗಿ ಧನ ಸಹಾಯ ನೀಡಿದರು. ಈ ಸಂದರ್ಭದಲ್ಲಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಾಬು ಹೆಗ್ಡೆ ಹಾಗೂ ಶಂಕರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
27/08/2022 08:16 am