ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾಳೆ : ಕಾರ್ಕಳದಿಂದ ಉಡುಪಿ ತನಕ ಅಗ್ನಿಪಥ್ ದೌಡ್ : ಶಾಸಕ ರಘುಪತಿ ಭಟ್

ಉಡುಪಿ: ಉಡುಪಿ ಜಿಲ್ಲೆ ರಜತ ಸಂಭ್ರಮದ ಹೊತ್ತಿಗೆ ನಾಳೆ ಕಾರ್ಕಳದಿಂದ ಉಡುಪಿತನಕ ಅಗ್ನಿಪಥ್ ದೌಡ್ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ,ಕಾರ್ಕಳದಲ್ಲಿ ನಾಳೆ ಇಂಧನ ಸಚಿವ ಸುನಿಲ್ ಕುಮಾರ್ ಅಗ್ನಿಪಥ್ ದೌಡ್ ಗೆ ಬೆಳಿಗ್ಗೆ ಏಳೂವರೆ ಗಂಟೆಗೆ ಚಾಲನೆ ನೀಡಲಿದ್ದಾರೆ.

ಕಾರ್ಕಳದಿಂದ ಉಡುಪಿಗೆ ಸುಮಾರ್ 75 ಕಿ.ಮೀ ಈ ದೌಡ್ ನಡೆಯಲಿದೆ.ನೇಷನ್ ಫಸ್ಟ್ ನವರು ಇದನ್ನು ಆಯೋಜಿಸಿದ್ದು ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ರಾಜಕೀಯ ಕಾರಣಕ್ಕೆ ಅಗ್ನಿಪಥ್ ಯೋಜನೆಯನ್ನು ವಿರೋಧಿಸಲಾಗಿತ್ತು.ಅದರೆ ಉಡುಪಿ ಜಿಲ್ಲೆಯಿಂದ ಈ ಯೋಜನೆಗೆ ಬೆಂಬಲ ಸೂಚಿಸಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಯುವಜನತೆ ಇದರಿಂದ ಸ್ಪೂರ್ತಿ ಪಡೆಯುವ ಮೂಲಕ ದೇಶಸೇವೆಗೆ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇದನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

23/08/2022 03:38 pm

Cinque Terre

10.6 K

Cinque Terre

3

ಸಂಬಂಧಿತ ಸುದ್ದಿ