ಮಂಗಳೂರು: ಅಲ್ಪಸಂಖ್ಯಾತರು ಸತ್ತರೆ ಬಿಜೆಪಿಗೆ ವೋಟ್ ಬರಲ್ಲ, ಹಿಂದೂಗಳು ಸಾಯಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ರಾಮಾನಾಥ್ ರೈ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರ, "ಕಾಂಗ್ರೆಸ್ ಹಿಂಸೆಯನ್ನು ಬೆಂಬಲಿಸುವ ಪಕ್ಷ ಅಲ್ಲ. ಈಗ ಮತೀಯ ವಾದಿಗಳು ಪರಾಕಷ್ಠೆ ಮೆರೆದಿದ್ದು, ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದಿದ್ದಾರೆ. ವಿಪಕ್ಷ ನಾಯಕ ಹುದ್ದೆಗೆ ತನ್ನದೇ ಗೌರವ ಇದೆ. ಪ್ರಮುಖ ಸ್ಥಾನದಲ್ಲಿರುವ ಸಿದ್ಧರಾಮಯ್ಯನವರ ವಿರುದ್ಧದ ಕೃತ್ಯಕ್ಕೆ ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಅನೇಕ ಹತ್ಯೆ ಪ್ರಕರಣಗಳು ನಡೆದಿವೆ. ಆದರೆ, ಈ ಪ್ರಕರಣಗಳ ಆರೋಪಿಗಳಲ್ಲಿ ಯಾರೂ ಕಾಂಗ್ರೆಸ್ ಕಾರ್ಯಕರ್ತರು ಇಲ್ಲ. ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವವರಲ್ಲಿ ಹೆಚ್ಚಿನವರು ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಕಾರ್ಯಕರ್ತರು ಮತ್ತು ಎಸ್‌ಡಿಪಿಐ ಕಾರ್ಯಕರ್ತರು’ ಎಂದರು.
PublicNext
21/08/2022 07:15 am