ಕುಂದಾಪುರ : 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ,ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯೋಗದಲ್ಲಿ ನಡೆದ “ಭಾರತಕ್ಕಾಗಿ ನಡಿಗೆ” ಕಾಲ್ನಡಿಗೆ ಜಾಥಾವು ಉದ್ಘಾಟನೆಗೊಂಡಿತು.
ಬ್ರಹ್ಮಾವರ ಬಸ್ಸು ನಿಲ್ದಾಣದ ಬಳಿಯಿಂದ ಆರಂಭವಾಗಿ , ತಾಲೂಕು ಕಛೇರಿ ಮಾರ್ಗವಾಗಿ , ಬ್ರಹ್ಮಾವರ ಪೇಟೆ ಆಕಾಶವಾಣಿ ಸರ್ಕಲ್ ಬಾರ್ಕೂರು ರಸ್ತೆ ಹಂದಾಡಿ ಶಾಲೆಯ ಬಳಿ ತಿರುವಿನಲ್ಲಿ ಹಂದಾಡಿಗೆ ಸಾಗಿ ಅಲ್ಲಿಂದ ನೇರ ಕುಮ್ರಗೋಡು ರಾಷ್ಟ್ರೀಯ ಹೆದ್ದಾರಿ ತಲುಪಿ ಉಪ್ಪಿನಕೋಟೆ ಮಾರ್ಗವಾಗಿ ಸಾಲಿಕೇರಿ ಶ್ರೀ ವೀರಭದ್ರ ದೇವಸ್ಥಾನದ ಬಳಿ ಜಾಥ ಸಮಾಪನಗೊಂಡಿತು.
ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಉಭಯ ಬ್ಲಾಕ್ ಗಳ ಅಧ್ಯಕ್ಷರುಗಳಾದ ದಿನಕರ್ ಹೇರೂರು ಮತ್ತು ರಮೇಶ್ ಕಾಂಚನ್ ದೀಪಕ್ ಕೋಟ್ಯಾನ್ ಮತ್ತು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷರು ರೋಷನ್ ಶೆಟ್ಟಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಜಿಲ್ಲಾ ಪಂಚಾಯತ್ ಸದಸ್ಯರು ವಿವಿಧ ಘಟಕದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
Kshetra Samachara
08/08/2022 03:27 pm