ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಮನೆ ಕುಸಿದು ಮೃತಪಟ್ಟ ಮಕ್ಕಳ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ,ಡಿಸಿ ಭೇಟಿ!

ಸುಳ್ಯ: ಮನೆ ಕುಸಿದು ಬಿದ್ದು ಮೃತರಾದ ಕುಸುಮಾಧರ ಮತ್ತು ರೂಪಶ್ರೀ ದಂಪತಿಗಳ ಮಕ್ಕಳಾದ ಶ್ರುತಿ (11) ಜ್ಞಾನಶ್ರೀ (6) ಇವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಸೇರಿ ಅಧಿಕಾರಿಗಳು ಭೇಟಿ ನೀಡಿ ಮನೆ ಕಟ್ಟಿಕೊಡುವ ಭರವಸೆ ನೀಡಿದರು.

ಎಲ್ಲೆಲ್ಲಿ ಪ್ರಕೃತಿಯ ತೊಂದರೆಗಳು ಆಗಿದೆಯೋ ಅಲ್ಲಿ ಸರಕಾರ ನಿಮ್ಮೊಂದಿಗೆ ನಿಮ್ಮ ನೆರವಿಗೆ ಇದೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಅಂಗಡಿಗಳಿಗೆ ನಷ್ಟಪರಿಹಾರ ಕೊಡುವ ವ್ಯವಸ್ಥೆ ಪ್ರಸ್ತುತ ಇಲ್ಲ. ಆದರೆ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದೆ. ಮುಖ್ಯಮಂತ್ರಿಗಳು ಮೌಖಿಕವಾಗಿ ಪರಿಹಾರ ಕೊಡುವ ಅಂತ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಆಗದಿರಲಿ. ಸಾರ್ವಜನಿಕರೂ ಈ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ ಎಂದು ಸಚಿವರು ಹೇಳಿದರು.

ಕುಸುಮಾಧರ ಅವರ ಸುಳ್ಯ ತಾಲೂಕಿನ ಪಂಜದಲ್ಲಿರುವ ಮನೆಗೆ ಬರುವ ರಸ್ತೆಯು ಸಂಪೂರ್ಣ ಕೆಟ್ಟು ಕೆಸರುಮಯ ಆಗಿರುವ ಹಿನ್ನಲೆಯಲ್ಲಿ ಸಚಿವರಾದಿ ಅಧಿಕಾರಿಗಳು ತಮ್ಮ ಇಲಾಖಾ ವಾಹನವನ್ನು ಬಿಟ್ಟು ಅರಣ್ಯ ಇಲಾಖೆಯ ಮತ್ತು ಖಾಸಗಿ ಜೀಪುಗಳಲ್ಲಿ ಮನೆ ತಲುಪುವ ಸ್ಥಿತಿ ಎದುರಾಗಿತ್ತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಸಿಇಓ ಕುಮಾರ್, ಎಸಿ ಗಿರೀಶ್ ನಂದನ್, ಕಡಬ ತಹಶೀಲ್ದಾರ್ ಅನಂತ ಶಂಕರ್, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ, ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ,ಮೆಸ್ಕಾಂ ಜೆಇಇ ಹರಿಕೃಷ್ಣ ಸೇರಿದಂತೆ ಕಂದಾಯ, ಮೆಸ್ಕಾಂ, ಸ್ಥಳೀಯ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

03/08/2022 04:20 pm

Cinque Terre

5.17 K

Cinque Terre

0

ಸಂಬಂಧಿತ ಸುದ್ದಿ