ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಾಳೆ ಯಾವುದೇ ಬಂದ್ ಇಲ್ಲ:ಬಜರಂಗದಳ ಸ್ಪಷ್ಟನೆ

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ನಾಳೆ 28/07/2022 ಗುರುವಾರದಂದು ದಕ್ಷಿಣಕನ್ನಡ ಜಿಲ್ಲೆ ಬಂದ್ ಎಂಬ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದೆ.ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಯಾವುದೇ ಬಂದ್ ಗೆ ಕರೆ ಕೊಟ್ಟಿಲ್ಲ ಎಂದು ಬಜರಂಗದಳದ ಮುಖಂಡ ಶರಣ್ ಪಂಪ್ವೆಲ್ ಸ್ಪಷ್ಟನೆ ನೀಡಿದ್ದಾರೆ.

ಹಿಂದೂ ಸಂಘಟನೆಯ ನಾಯಕ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಭಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಹೆಸರಿನಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದ್ದು ಜಿಲ್ಲೆಯಲ್ಲಿ ಬಜರಂಗದಳ ಯಾವುದೇ ಬಂದ್ ಗೆ ಕರೆ ಕೊಟ್ಟಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಗಣೇಶ್ ಕೆದಿಲ ಸ್ಪಷ್ಟನೆ ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

27/07/2022 08:48 pm

Cinque Terre

7.28 K

Cinque Terre

1

ಸಂಬಂಧಿತ ಸುದ್ದಿ