ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಜಕೀಯ ಪ್ರಭಾವದಿಂದ ಈಶ್ವರಪ್ಪಗೆ ಕ್ಲೀನ್ ಚಿಟ್ ಸಿಕ್ಕಿದೆ: ಮಾಜಿ ಸಚಿವ ರೈ ವಾಗ್ದಾಳಿ

ಮಂಗಳೂರು: ಈಶ್ವರಪ್ಪರಿಗೆ ಕ್ಲೀನ್ ಚಿಟ್ ಸತ್ಯಕ್ಕೆ ಸಂದ ಜಯ ಅಲ್ಲ, ಸುಳ್ಳಿಗೆ ಸಂದ ಜಯ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್ ಸಾವಿಗೆ ನ್ಯಾಯ ಸಿಕ್ಕಿಲ್ಲ ಎಂದಿದ್ದಾರೆ.

ಈಶ್ವರಪ್ಪರನ್ನು ತನಿಖೆಯಿಂದ ಹೊರಗಿಡಲಾಗಿತ್ತು. ರಾಜಕೀಯ ಪ್ರಭಾವದಿಂದ ಕ್ಲೀನ್ ಚಿಟ್ ಸಿಕ್ಕಿದೆ. ಇದರ ಬಗ್ಗೆ ಮೊದಲೇ ಸಚಿವರು ಪರೋಕ್ಷವಾಗಿ ಹೇಳಿದ್ದರು. ಈಗ ಅಧಿಕೃತ ಆಗಿದೆ ಅಷ್ಟೆ. ಹಾಗಾಗಿ ಇದು ಸತ್ಯಕ್ಕೆ ಸಂದ ಜಯ ಎನ್ನುವವರು ನಾಚಿಕೆ ಮಾನ ಮರ್ಯಾದೆ ಇಲ್ಲದವರು. ಈಶ್ವರಪ್ಪ ಮಹಾಭ್ರಷ್ಟಾಚಾರಿ ಎಂದರು. ಜಾರ್ಜ್ ಪ್ರಕರಣಕ್ಕೂ ಇದಕ್ಕೂ ಹೋಲಿಕೆ ಮಾಡಬಾರದು. ಜಾರ್ಜ್ ಅವರಿಗೆ ನರೇಂದ್ರ ಮೋದಿ ಸರಕಾರದ ಸಿಬಿಐ ಕ್ಲೀನ್ ಚಿಟ್ ನೀಡಿತ್ತು. ಈಶ್ವರಪ್ಪ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು‌.

ಸುಳ್ಯದಲ್ಲಿ ಅಮಾಯಕ ಯುವಕ ಗುಂಪು ಥಳಿತದಿಂದ ಸಾವನ್ನಪ್ಪಿದ್ದಾನೆ. ಬಿಜೆಪಿ ಕೊಲೆಗಡುಕರ ಪಕ್ಷ. ಕಾಂಗ್ರೆಸ್ ಯಾವತ್ತೂ ಹಿಂಸೆಯನ್ನು ಪ್ರಚೋದಿಸಿಲ್ಲ. ಕಾಂಗ್ರೆಸ್ ನವರ ಮೇಲೆ ಎಫ್ಐಆರ್ ದಾಖಲಾಗಿಲ್ಲ. ಯುವಕನ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. 25 ಲಕ್ಷ ಪರಿಹಾರ ನೀಡಬೇಕು ಎಂದು ಹೇಳಿದರು.

Edited By : Shivu K
Kshetra Samachara

Kshetra Samachara

23/07/2022 03:28 pm

Cinque Terre

4.87 K

Cinque Terre

3

ಸಂಬಂಧಿತ ಸುದ್ದಿ