ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಜು. 24ರಂದು ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ, ವಿದ್ಯಾರ್ಥಿವೇತನ ವಿತರಣೆ

ಕಾಪು: ಜಿಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ - ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಸಹಭಾಗಿತ್ವದಲ್ಲಿ ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ, ವಿದ್ಯಾರ್ಥಿವೇತನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ

ಜುಲೈ 24ರಂದು ಮಾಧವ ಮಂಗಲ ಸಭಾಭವನದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಂಕೀರ್ಣದಲ್ಲಿ ಬೆಳಗ್ಗೆ 9.30ಕ್ಕೆ ನಡೆಯಲಿದೆ ಎಂದು ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿ‌ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಸಂಚಾಲಕ ಆರ್. ವಿವೇಕಾನಂದ ಶೆಣೈ ತಿಳಿಸಿದರು.

ಸುಪ್ರೀಂ ಕೋರ್ಟ್ ವಕೀಲ ರವಿಚಂದ್ರ ಕಿಣಿ ಉದ್ಘಾಟಿಸಲಿದ್ದು, ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ. ಲಿ. ಆಡಳಿತ ನಿರ್ದೆಶಕ ಪಿ‌. ರವೀಂದ್ರ ದಯಾನಂದ ಪೈ ದಿಕ್ಸೂಚಿ ಭಾಷಣ ಮಾಡುವರು. ಅನಂತ ವೈದಿಕ ಕೇಂದ್ರ ಉಡುಪಿಯ ವೇದಮೂರ್ತಿ ಚಿಂಪಿ ರಾಮಚಂದ್ರ ಅನಂತ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಗಣೇಶ್ ಬೀಡಿ ಪಾಲುದಾರ ಗೋವಿಂದ ಜಗನ್ನಾಥ ಶೆಣೈ , ಸಿಎ ಗೋಕುಲ್ ದಾಸ್ ಪೈ, ರತ್ನಾಕರ ಕಾಮತ್ , ಪಿ.ರಾಮಚಂದ್ರ ಶೆಣೈ ಭಾಗವಹಿಸಲಿದ್ದಾರೆ ಎಂದರು.

ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರದಲ್ಲಿ ಉಡುಪಿಯ ತ್ರಿಶಾ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಗೋಪಾಲಕೃಷ್ಣ ಭಟ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ನೀಡಲಿದ್ದಾರೆ.

ಹುತಾತ್ಮ ಯೋಧ ಮರಣೋತ್ತರ ಶೌರ್ಯ ಚಕ್ರ ಪುರಸ್ಕೃತ ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಅವರ ಪತ್ನಿ ಶಕುಂತಲಾ ಭಂಡಾರ್ಕರ್ ಅವರು ಭಾರತೀಯ ಸೇನೆಯಲ್ಲಿ ಯುವಜನರಿಗೆ ಲಭ್ಯವಿರುವ ಅವಕಾಶಗಳು ಸವಾಲುಗಳು ಮತ್ತು ಅವರ ಜೀವನ ಮತ್ತು ಸಾಧನೆಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಹಾಗೂ ಎಸ್ ಎಸ್ ಎಲ್ ಸಿ, ಪಿಯುಸಿ, ಸಿಇಟಿ, ನೀಟ್ ಮಾಡಲಾದ ಉನ್ನತ ವ್ಯಾಸಂಗದ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಜಿಎಸ್ಬಿ ಸಮಾಜದ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಲಿದೆ ಮತ್ತು ವಿದ್ಯಾಪೋಷಕ ನಿಧಿಯಿಂದ 500 ವಿದ್ಯಾರ್ಥಿಗಳಿಗೆ ಒಟ್ಟು 70 ಲಕ್ಷದ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಸತೀಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಸಿ.ಎ. ಗೋಪಾಲಕೃಷ್ಣ ಭಟ್ , ವಿದ್ಯಾಪೋಷಕ್ ಸ್ಕಾಲರ್ ಶಿಪ್ ಫಂಡ್ ನ ಅಧ್ಯಕ್ಷ ಎಸ್ ಎಸ್ ನಾಯಕ್, ಸಂಯೋಜಕ ವಿಜಯ್ ಕುಮಾರ್ ಶೆಣೈ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

20/07/2022 11:06 pm

Cinque Terre

5.38 K

Cinque Terre

0

ಸಂಬಂಧಿತ ಸುದ್ದಿ