ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇತ್ತ ಮಳೆ : ಅತ್ತ ಶಾಸಕರ ಲಡಾಖ್ ಅಧ್ಯಯನ ಪ್ರವಾಸ!

ಉಡುಪಿ : ಕಾಶ್ಮೀರ 370 ವಿಧಿ ರದ್ಧತಿ ಬಳಿಕ ನೂತನವಾಗಿ ಅಸ್ಥಿತ್ವಕ್ಕೆ ಬಂದ ಲಡಾಖ್ ಗೆ ಉಡುಪಿ ಶಾಸಕ ರಘುಪತಿ ಭಟ್, ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಪ್ರವಾಸ ಕೈಗೊಂಡಿದ್ದು ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಪ್ರವಾಸ ವೇಳೆ ಲಡಾಖ್ ರಾಜಧಾನಿ ಲೇಹ್ ನಲ್ಲಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಭರವಸೆಗಳ ಸಮಿತಿ ಅಧ್ಯಯನ ಸಭೆ ನಡೆಸಿದೆ.

ಕಾಶ್ಮೀರದ 370ವಿಧಿಯ ರದ್ಧತಿಯ ಬಳಿಕ ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಲ್ಲಿನ ಇಂದಿನ ಸಾಮಾಜಿಕ ಸ್ಥಿತಿಗತಿ, ಕೃಷಿ, ಶಿಕ್ಷಣ, ನೀರಾವರಿ, ಪ್ರವಾಸೋಧ್ಯಮ, ವ್ಯಾಪಾರ ಹಾಗೂ ಸಮಗ್ರ ಅಭಿವೃದ್ಧಿಯ ವಿಷಯಗಳ ಕುರಿತು ಅಧ್ಯಯನಕ್ಕಾಗಿ ತಂಡ ತೆರಳಿದೆ. ಕರ್ನಾಟಕ ವಿಧಾನ ಸಭೆಯ ಸರ್ಕಾರಿ ಭರವಸೆ ಸಮಿತಿಯ ತಂಡವು ಆಯೋಜಿಸಿದ್ದ ಅಧ್ಯಯನ ಪ್ರವಾಸದಲ್ಲಿ ರಾಜ್ಯದ ಸುಮಾರು 20 ಶಾಸಕರು ಭಾಗಿಯಾಗಿದ್ದು ಉಡುಪಿ ಜಿಲ್ಲೆಯ ಇಬ್ಬರಿದ್ದಾರೆ.

ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ರಸ್ತೆ ಮತ್ತು ಚರಂಡಿ ಅವ್ಯವಸ್ಥೆಯಿಂದಾಗಿ ಆದ ಸಮಸ್ಯೆ ಹೇಳಿಕೊಳ್ಳಲು ಕ್ಷೇತ್ರದ ಶಾಸಕರೇ ಇಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

02/07/2022 05:09 pm

Cinque Terre

8.46 K

Cinque Terre

2

ಸಂಬಂಧಿತ ಸುದ್ದಿ