ಬಜಪೆ: ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಕಾಂಗ್ರೆಸ್ ಪ್ರಜಾ ಪ್ರತಿನಿಧಿ ಸಮಿತಿ ಬಜಪೆ ಆಶ್ರಯದಲ್ಲಿ ಬಿಜೆಪಿಯ ದುರಾಡಳಿತದ ವಿರುದ್ಧ ಬಜಪೆಯ ಬಸ್ಸು ನಿಲ್ದಾಣ ಬಳಿ ಇಂದು ಸಂಜೆ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಬಜಪೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ನಂತರ ಪೂರ್ಣ ಪ್ರಮಾಣದ ಕಾರ್ಯ ನಿರ್ವಹಿಸದೆ ಕಟ್ಟಡ ತೆರಿಗೆ, ವಿದ್ಯುತ್, ನೀರಿನ ಶುಲ್ಕ, ಲೈಸೆನ್ಸ್ ಶುಲ್ಕ ದುಪ್ಪಟ್ಟುಗೊಂಡಿದೆ. ಬಿಜೆಪಿ ಆಡಳಿತದ ಸರಕಾರ ಭ್ರಷ್ಟಾಚಾರ, ದುರಾಡಳಿತ ನಡೆಸುತ್ತಿದೆ ಎಂದು ಹರಿಹಾಯ್ದರು.
ಮುಖಂಡ ಮಿಥುನ್ ರೈ , ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ , ನಿಸಾರ್ ಕರಾವಳಿ, ಸಾಮಾಜಿಕ ಕಾರ್ಯಕರ್ತ ಸಿರಾಜ್ ಬಜ್ಪೆ ,ಬಿ.ಜೆ. ರಹೀಮ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ಹಾಗೂ ಮೆಸ್ಕಾಂ ಅಧಿಕಾರಿಗೆ ಮನವಿ ನೀಡಲಾಯಿತು.
Kshetra Samachara
29/06/2022 10:20 pm