ಮಂಗಳೂರು: ವಿವಾದಿತ ಹೇಳಿಕೆ ನೀಡಿರುವ ನೂಪುರ್ ಶರ್ಮಾರಿಗೆ ಬೆಂಬಲ ನೀಡಿರುವ ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ರನ್ನು ಅಮಾನುಷವಾಗಿ ಹತ್ಯೆಗೈದು ಇಡೀ ದೇಶದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿರುವ ಮುಸ್ಲಿಂ ಮತಾಂಧರನ್ನು ನಡುರಸ್ತೆಯಲ್ಲೇ ಗುಂಡಿಕ್ಕಿ ಕೊಲ್ಲಬೇಕೆಂದು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಆಗ್ರಹಿಸಿದೆ.
ಕನ್ಹಯ್ಯರವರಿಗೆ ಜೀವ ಬೆದರಿಕೆ ಇದ್ದರೂ ಪೋಲೀಸ್ ಇಲಾಖೆ ಮತಾಂಧರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪರಿಣಾಮ ಅಮಾಯಕ ಹಿಂದುವಿನ ಕಗ್ಗೊಲೆಯಾಗಿದೆ. ನೂಪುರ್ ಶರ್ಮಾರ ಹೇಳಿಕೆಯನ್ನು ಬೆಂಬಲಿಸಿದಕ್ಕೆ ಕನ್ಹಯ್ಯರ ಹತ್ಯೆಯಾಗಿದೆ ಎಂದಾದರೆ ಇಡೀ ಹಿಂದೂ ಸಮಾಜವೇ ನೂಪುರ್ ಶರ್ಮಾರ ಹೇಳಿಕೆಯನ್ನು ಬೆಂಬಲಿಸುತ್ತದೆ. ಹಿಂದೂ ಸಮಾಜದ ಸಹನೆಯನ್ನು ಪರೀಕ್ಷಿಸಬೇಡಿ. ಪ್ರಧಾನ ಮಂತ್ರಿಯವರನ್ನು ಇದೇ ಚಾಕುವಿನಿಂದ ಕಡಿಯುತ್ತೇವೆ ಎಂದು ಘಂಟಾಘೋಷವಾಗಿ ಸಾರಿದ ಮತಾಂಧರನ್ನು ನಡುರಸ್ತೆಯಲ್ಲಿ ಗುಂಡಿಕ್ಕಿ ಅಮಾನುಷ ರೀತಿಯಲ್ಲಿಯೇ ಕೊಲ್ಲಬೇಕು ಎಂದು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಆಗ್ರಹಿಸಿದೆ.
Kshetra Samachara
29/06/2022 07:19 pm