ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಅಗ್ನಿಪಥ್‌ ಯೋಜನೆ ವಿರುದ್ಧ ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ

ಮುಲ್ಕಿ:ಕೇಂದ್ರದ ಬಿಜೆಪಿ ಸರಕಾರ ಜಾರಿಗೊಳಿಸಲು ಉದ್ದೇಶಿಸಿದ ಅಗ್ನಿಪಥ್‌ ಯೋಜನೆ ವಿರುದ್ದ ಕಿನ್ನಿಗೋಳಿ ಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಕ್ಷೇತ್ರಗಳು ಖಾಸಗೀಕರಣಗೊಂಡಿದೆ. ಬಿಜೆಪಿ ಸರಕಾರ ಅದಕ್ಕೆ ಒತ್ತು ಕೊಡುತ್ತಿದೆ. ಕೃಷಿ ಮಸೂದೆ ಜಾರಿಗೆ ತರಲು ಮುಂದಾದಾಗ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದು ಮಸೂದೆಯನ್ನು ಸರಕಾರ ಹಿಂಪಡೆಯಿತು.

ಇದೀಗ ಅಗ್ನಿಪಥ್‌ ಯೋಜನೆ ಮೂಲಕ ಯುವಕರಿಗೆ ಹಣದ ಆಮಿಷ ಒಡ್ಡುತ್ತಿದೆ. ಈ ಯೋಜನೆ ಯುವಕರ ಮೇಲಿನ ಪ್ರೀತಿಯಿಂದಲ್ಲ, ಗುಜರಾತ್ ಕರ್ನಾಟಕ ಚುನಾವಣೆಯ ಗಿಮಿಕ್ಕು. ಅಗ್ನಿಪಥ್‌ ಯೋಜನೆ ಮೂಲಕ ಯುವಕರ ಶಿಕ್ಷಣ ಕುಂಠಿತವಾಗುತ್ತಿದೆ. ಬಿಜೆಪಿಯ ವೈಫಲ್ಯತೆ, ಉದ್ಯೋಗ ಸೃಷ್ಠಿ ಇಲ್ಲ, ಯುವಕರಿಗೆ ಆಕರ್ಷಣೆ ಯೋಜನೆ ಎಂಬ ಭ್ರಮೆಯಾಗಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾಂಗ್ರೆಸ್ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದರು.

ಈ ಸಂದರ್ಭ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ, ಸುಕುಮಾರ್ ಸನಿಲ್, ಶೈಲಾ ಸಿಕ್ವೇರಾ, ರಾಕಿ ಪಿಂಟೋ,ಮಯ್ಯದಿ ಪಕ್ಷಿಕೆರೆ, ಪದ್ಮಿನಿ ವಸಂತ್, ಪಿಲೋಮಿನ ಸಿಕ್ವೇರಾ, ಸಂತೋಷ್ ಕುಮಾರ್ ಕಿನ್ನಿಗೋಳಿ , ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

27/06/2022 01:03 pm

Cinque Terre

9.08 K

Cinque Terre

2

ಸಂಬಂಧಿತ ಸುದ್ದಿ