ಉಡುಪಿ: ದೇಶದ ಪುಣ್ಯಪುರುಷರ ಸಾಧನೆಗಳನ್ನು ಪಠ್ಯದಲ್ಲಿ ತಿರುಚಲಾಗಿದೆ. ಅಂಬೇಡ್ಕರ್, ಬಸವಣ್ಣ, ಕುವೆಂಪು, ನಾರಾಯಣಗುರು, ಭಗತ್ ಸಿಂಗ್, ಕನಕದಾಸರಿಗೆ ಅವಮಾನ ಮಾಡಲಾಗಿದೆ. ಬಿಜೆಪಿ ಸಾಮಾಜಿಕ ನ್ಯಾಯದ ಬದಲು ಶ್ರೇಣೀಕೃತ ಸಮಾಜ ಕಟ್ಟಲು ಮುಂದಾಗಿದೆ. ಇಂತಹ ಕೆಟ್ಟ ಸರಕಾರ ಎಂದಿಗೂ ಬಂದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಕಾಂಗ್ರೆಸ್ ನವ ಸಂಕಲ್ಪ ಶಿಬಿರದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು
ಕಾಂಗ್ರೆಸ್ ಕಾಲದ ಪಠ್ಯದಲ್ಲಿ ತಪ್ಪಿದ್ದರೆ ಬಿಜೆಪಿ ಏಕೆ ಕಣ್ಮುಚ್ಚಿ ಕುಳಿತಿತ್ತು. ಬಿಜೆಪಿಗೆ ಪ್ರಶ್ನೆ ಎತ್ತುವ ಶಕ್ತಿ ಇರಲಿಲ್ಲವೇ? ಆಗಿನ ಪಠ್ಯದಲ್ಲಿ 150 ತಪ್ಪು ಇತ್ತು ಎಂಬುದು ಹಸಿ ಸುಳ್ಳು ಎಂದರು.
ಮಕ್ಕಳಿಗೆ ಆಗಿರುವ ತೊಂದರೆಗೆ ಸರಕಾರವೇ ನೇರ ಹೊಣೆ. ಟ್ಯುಟೋರಿಯಲ್ ಅಧ್ಯಾಪಕನನ್ನು ಪಠ್ಯ ಸಮಿತಿಗೆ ಹಾಕಿದರೆ ಯಾವ ರೀತಿಯ ಪಠ್ಯ ಪುಸ್ತಕ ಬರುತ್ತದೆ ಎಂಬುದಕ್ಕೆ ಇದುವೇ ಉದಾಹರಣೆ. ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಬಿಜೆಪಿ ಇಂತಹ ಕೆಲಸ ಮಾಡುತ್ತಿದೆ. ಧರ್ಮ ಧರ್ಮಗಳ ಮಧ್ಯೆ ಕಂದಕ ನಿರ್ಮಿಸುತ್ತಾರೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯೇ ಬಿಜೆಪಿಗೆ ಇಲ್ಲ ಎಂದು ಹೇಳಿದರು.
ಡಿಕೆಶಿ ಪಠ್ಯಪುಸ್ತಕ ಹರಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮಾಜ ಸುಧಾಕರ ವಿಚಾರವನ್ನು ತಿರುಚಿರುವ ಬಗ್ಗೆ ಆಕ್ರೋಶದಿಂದ ಮಾಡಲಾಗಿದೆ. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಅಲ್ಲ ಎಂದು ತಿರುಚಿದರೆ ಸುಮ್ಮನೆ ಕುಳಿತು ಕೊಳ್ಳಲು ಆಗುತ್ತದೆಯೇ ಎಂದು ಸಮರ್ಥಿಸಿಕೊಂಡರು.
Kshetra Samachara
25/06/2022 12:40 pm