ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಮಹಿಳೆಯರನ್ನು ಸಂಘಟಿಸಿ, ಪಕ್ಷ ಬಲಪಡಿಸಿ; ಮಮತಾ ಗಟ್ಟಿ

ಮುಲ್ಕಿ:ಇಂದಿರಾ ಗಾಂಧಿಯಂತಹ ಉಕ್ಕಿನ ಮಹಿಳೆಯನ್ನು ಪಡೆದ ಕಾಂಗ್ರೆಸ್ ಪಕ್ಷ.ಆದರ್ಶ ವ್ಯಕ್ತಿಗಳ ಪ್ರೇರಣೆಯಿಂದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ರವರು ಮಹಿಳೆಯರಿಗೆ ರಾಜಕೀಯ ಶಕ್ತಿ ನೀಡುವ ಉದ್ದೇಶಕ್ಕೆ ಎಂದೇ ಪ್ರಾರಂಭಿಸಿದ "ನಾ..ನಾಯಕಿ"ಕಾರ್ಯಕ್ರಮವನ್ನು ಮೂಡಬಿದ್ರೆಯಲ್ಲಿ ಕ್ಷೇತ್ರದಲ್ಲಿ ಕೂಡ ಬಹಳ ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಿ ಮಹಿಳೆಯರನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಎಂದು ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಮಮತಾ ಗಟ್ಟಿ ಹೇಳಿದರು.

ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಚುನಾವಣೆ ಉಸ್ತುವಾರಿ ಯಾದ ಮಿಥುನ್ ರೈ ರವರು ಮಾತನಾಡಿ, ಮುಲ್ಕಿ ಬ್ಲಾಕ್ ವ್ಯಾಪ್ತಿಗೆ ಸೇರಿದ ಬೂತ್ ಗಳಲ್ಲಿ ಈಗಾಗಲೇ ಪಕ್ಷ ಸಂಘಟನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಕೆಲವೇ ದಿನಗಳಲ್ಲಿ ಕಾರ್ಯಕ್ರಮಗಳ ರೂಪುರೇಖೆಗಳನ್ನು ತಿಳಿಸಲಾಗುವುದು. ಕಾರ್ಯಕರ್ತರು ಪಕ್ಷ ಸಂಘಟನೆಗೆ ಸಹಕಾರ ನೀಡಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸದಸ್ಯತ್ವ ಪ್ರಕ್ರಿಯೆಯಲ್ಲಿ ಗರಿಷ್ಠ ಸಾಧನೆಗೈದ 10 ಮಂದಿ ಕಾರ್ಯಕರ್ತರನ್ನು ಗೌರವಿಸಲಾಯಿತು.

ಮುಲ್ಕಿ ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಸ್ವಾಗತಿಸಿದರು.

ವೇದಿಕೆಯಲ್ಲಿ ಕೆಪಿಸಿಸಿ ಕೋ ಆರ್ಡಿನೇಟರ್ ಎಚ್ .ವಸಂತ ಬರ್ನಾಡ್, ಬ್ಲಾಕಿನ ಹಿರಿಯ ಉಪಾಧ್ಯಕ್ಷ ಗಳಾದ ಹಸನಬ್ಬ ಬಾಳ, ಮೋನಪ್ಪ ಶೆಟ್ಟಿ ಎಕ್ಕಾರು, ಬಾಬು ಶೆಟ್ಟಿ ಮಳವೂರು, ಬ್ಲಾಕಿನ ಕೋಶಧಿಕಾರಿ ಅಶ್ವಿನಿ ಅಲ್ವಾ, ಯುವ ಕಾಂಗ್ರೆಸ್ ನ ಅಧ್ಯಕ್ಷ ಅಶೋಕ್ ಪೂಜಾರ್, ಬ್ಲಾಕ್ ಎಸ್ಸಿಎಸ್ಟಿ ಸೆಲ್ಲ್ ಅಧ್ಯಕ್ಷ ಚಂದ್ರಶೇಖರ್ ಕಿನ್ನಿಗೋಳಿ ಇದ್ದರು.

Edited By : PublicNext Desk
Kshetra Samachara

Kshetra Samachara

19/06/2022 08:19 pm

Cinque Terre

2.25 K

Cinque Terre

0

ಸಂಬಂಧಿತ ಸುದ್ದಿ