ವಿಟ್ಲ: ಪ್ರವಾದಿ ಮಹಮ್ಮದ್ ಪೈಗಂಬರವರ ಅವಹೇಳನ ಬಿಜೆಪಿಯ ಇನ್ನೊಂದು ಮುಖವನ್ನು ಬಯಲು ಮಾಡಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು ಹೇಳಿದರು.
ಅವರು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರವಾದಿ ಮಹಮ್ಮದ್ ಪೈಗಂಬರವರು ವಿಶ್ವದಾದ್ಯಂತ ಸುಮಾರು 160 ಕೋಟಿ ಜನರಿಗೆ ಆರಾಧ್ಯ ದೇವರ ಸ್ವರೂಪದಲ್ಲಿದ್ದಾರೆ. ಅದಲ್ಲದೆ ಮುಸ್ಲಿಂ ಸಮುದಾಯಕ್ಕೆ ಅವರು ಹಾಕಿ ಕೊಟ್ಟ ಜೀವನ ಕ್ರಮ ಶ್ರೇಷ್ಟತೆಯ ಸಾಲಿನಲ್ಲಿ ನಿಲ್ಲುತ್ತದೆ.
ಬಿಜೆಪಿಗರು ಯಾವಾಗಲೂ ಅವರದೇ ಆದ ನಿಲುವಿನಲ್ಲಿ ತಮ್ಮ ಸಮರ್ಥನೆಯನ್ನು ನಿರೂಪಿಸುತ್ತಾರೆ. ಅವರು ಪ್ರಪಂಚದಲ್ಲಿ ಯಾರನ್ನು ಒಪ್ಪುತ್ತಾರೋ ಗೊತ್ತಿಲ್ಲ ಎಂದರು.
ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವರವರು ಮಾತನಾಡಿ ಬಿಜೆಪಿಗರು ದಯವಿಟ್ಟು ಇನ್ನು ಮುಂದೆ ಮಸೀದಿಗಳಲ್ಲಿ ಮಂದಿರದ ಕುರುಹು ಹುಡುಕುವ ಕೆಲಸ ಬಿಟ್ಟು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗದಂತೆ ಆಡಳಿತ ನಡೆಸಲಿ.
1947ರಲ್ಲಿ ಸ್ವಾತಂತ್ರ್ಯ ಸಿಕ್ಕಿ ನಮ್ಮ ಸಂವಿಧಾನ ರೂಪಿಸಿಗೊಂಡ ಮೇಲೆ ಅದಕ್ಕೆ ಅದರದ್ದೇ ಆದ ನಿಯಮ ಕರಡು ಕಾನೂನುಗಳಿವೆ. ಮಾನ್ಯ ಮೋಹನ್ ಭಾಗವತ್ ಕೂಡ ಇದರ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕ್ತಾರ ರಮಾನಾಥ ವಿಟ್ಲ, ವಿನ್ಸೆಂಟ್, ಶ್ರೀನಿವಾಸ್ ಶೆಟ್ಟಿ ಕೊಲ್ಯ ಉಪಸ್ಥಿತರಿದ್ದರು.
Kshetra Samachara
16/06/2022 03:56 pm