ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಕೈ ಕಾರ್ಯಕರ್ತರಿಬ್ಬರ ಗಲಾಟೆ-ವೀಡಿಯೋ ವೈರಲ್-ಪ್ರಕರಣ ಆಗಿಲ್ಲ ದಾಖಲು !

ಬೆಳ್ತಂಗಡಿ: ದನದ ವಿಚಾರದಲ್ಲಿ ವಾಹನ ತಡೆದ ಕೋಪದಲ್ಲಿ ವಿಪರೀತ ಕುಡಿದು ಬಂದು ಗಲಾಟೆ ಮಾಡಿದ ಮಂಗಳೂರು ಪಬ್ ಪ್ರಕರಣ ಸೇರಿದಂತೆ ಒಟ್ಟು ಒಂಬತ್ತು ಪ್ರಕರಣದ ರೌಡಿಶೀಟರ್ ಒಬ್ಬನಿಗೆ ತನ್ನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಿಂದ ಹಿಗ್ಗಮುಗ್ಗ ಥಳಿಸಿದ ಘಟನೆ ಶಿಶಿಲ ಗ್ರಾಮದ ಶಿಶಿಲ ಪೇಟೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಒಂಬತ್ತು ಪ್ರಕರಣಗಳ ರೌಡಿಶೀಟರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತನಾಗಿರುವ ಕಿರಣ್ ಶಿಶಿಲ ಮತ್ತು ಶಿಶಿಲ‌ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ನಡುವೆ ಮಂಗಳವಾರ ರಾತ್ರಿ 7:30 ರಿಂದ 10 ಗಂಟೆವರೆಗೆ ಶಿಶಿಲ ನಾಗನಡ್ಕ ಪೇಟೆಯಲ್ಲಿ ಗಲಾಟೆ ನಡೆದಿದ್ದು ಈ ವೇಳೆ ಇಬ್ಬರು ನಡುವೆ ಅವ್ಯಾಚ ಶಬ್ದಗಳಿಂದ ಬೈದುಕೊಂಡಿದ್ದು ನಂತರ ಪುರುಷೋತ್ತಮ ರೌಡಿಶೀಟರ್ ಕಿರಣ್ ಶಿಶಿಲ ಗೆ ನಡು ರಸ್ತೆಯಲ್ಲಿ ನೆಲಕ್ಕೆ ಉರುಳಿಸಿ ಹಿಗ್ಗಮುಗ್ಗ ಥಳಿಸಲಾಗಿದೆ ಈ ವಿಡಿಯೋ ಇದೀಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.

ನಡುರಸ್ತೆಯಲ್ಲಿ ಗಲಾಟೆಗೆ ಕಾರಣ : ಕಳೆದ ಕೆಲ ದಿನಗಳ ಹಿಂದೆ ರೌಡಿಶೀಟರ್ ಕಿರಣ್ ಶಿಶಿಲ ಹಾಸನ ಜಿಲ್ಲೆಗೆ ಸಾಕಲು ಶಿಶಿಲ ಊರಿನಿಂದ ನಾಲ್ಕು ದನ ಕಾನೂನು ರೀತಿಯಲ್ಲಿ ಪರವಾನಿಗೆ ಪಡೆದುಕೊಂಡು ವಾಹನದಲ್ಲಿ ಹಾಸನಕ್ಕೆ ಸಾಗಿಸುವ ವೇಳೆ ಪುರುಷೋತ್ತಮ ಅಡ್ಡಗಟ್ಟಿದ್ದಾರೆ. ಈ ವೇಳೆ ಕಿರಣ್ ಶಿಶಿಲ ಅವರಿಗೆ ಬೈದು ವಾಹನ ಕಳುಹಿಸಿಕೊಟ್ಟಿದ್ದಾನೆ. ಈ ಬಗ್ಗೆ ಸಾಮಾಜಿಕಜಾಲತಾಣದಲ್ಲಿ ಪುರೋಷತ್ತಮ ಅಕ್ರಮ ದನ ಸಾಗಾಟ ಮಾಡಿ ಹಣ ಮಾಡುತ್ತಿರುವ ಕಿರಣ್ ಶಿಶಿಲ ಎಂದು ಸಂದೇಶ ವೈರಲ್ ಮಾಡಿದ್ದರು.

ಇದಕ್ಕೆ ಕೋಪಗೊಂಡ ಕಿರಣ್ ಶಿಶಿಲ ಮಂಗಳವಾರ ರಾತ್ರಿ ಕುಡಿದು ತನ್ನ ಮೂವರು ಸ್ನೇಹಿತರ ಜೊತೆ ಬೊಲೆರೋ ವಾಹನದಲ್ಲಿ ಶಿಶಿಲ ನಾಗನಡ್ಕ ಪೇಟೆಗೆ ಬಂದು ಪುರುಷೋತ್ತಮನಿಗೆ ಮೊಬೈಲ್ ಮೂಲಕ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾನೆ. ಈ ವೇಳೆ ಇಬ್ಬರು ಕೈ ಕಾರ್ಯಕರ್ತರ ನಡುವೆ ಅವ್ಯಚ ಶಬ್ದಗಳಿಂದ ಬೈದುಕೊಂಡಿದ್ದು ನಂತರ ನೆಲಕ್ಕೆ ಉರುಳಿಸಿ ಹೊಡೆದಾಟ ಆಗಿದೆ. ಇದನ್ನು ನೂರಕ್ಕೂ ಅಧಿಕ ಊರವರು ನೋಡಿದ್ದು ಈ ವೇಳೆ ಇವರಿಬ್ಬರ ಹೊಡೆದಾಟವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ವೈರಲ್ ಮಾಡಿದ್ದಾರೆ.

ಪ್ರಕರಣ ದಾಖಲಿಸಿಲ್ಲ: ಈ ಬಗ್ಗೆ ಇಬ್ಬರು ಕೂಡ ಯಾವುದೇ ಪ್ರಕರಣವನ್ನು ನೀಡಿಲ್ಲ. ಅದಲ್ಲದೆ ಧರ್ಮಸ್ಥಳ ಪೊಲೀಸರು ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ ಮಾಡಿರುವ ವೀಡಿಯೋ ಇದ್ದರೂ ಈ ವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ.

ರೌಡಿ ಶೀಟರ್ ಕಿರಣ್ ಶಿಶಿಲ ಹಿನ್ನೆಲೆ ಕಳೆದ ಗ್ರಾಮ ಪಂಚಾಯತ್ ವರೆಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ. ನಂತರ ಸ್ಥಳೀಯರ ಜೊತೆ ಗಲಾಟೆ ನಡೆದು ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದ. ಕಳೆದ ವರ್ಷ ಬೆಂಗಳೂರಿನಲ್ಲಿ ರೌಡಿಶೀಟರ್ ಒಬ್ಬನ ಕೊಲೆ ಯತ್ನದಲ್ಲಿ ಜೈಲು ಸೇರಿ ಬಂದಿದ್ದ , ಈತನ ಮೇಲೆ ಮಂಗಳೂರು ಪಬ್ ದಾಳಿ ಸೇರಿದಂತೆ ಒಂಬತ್ತು ಕೇಸ್ ಇದೆ.

Edited By :
Kshetra Samachara

Kshetra Samachara

09/06/2022 04:26 pm

Cinque Terre

8.01 K

Cinque Terre

0

ಸಂಬಂಧಿತ ಸುದ್ದಿ