ಉಡುಪಿ: ಸ್ವಾತಂತ್ರ್ಯದ ಪರಿಕಲ್ಪನೆ ಹುಟ್ಟುಹಾಕಿದ್ದೇ ವೀರಸಾವರ್ಕರ್ .ಅಂಡಮಾನ್, ಬರ್ಮಾ ಜೈಲಿನಲ್ಲಿದ್ದವರು ನಿಜವಾದ ಸ್ವಾತಂತ್ರ ಹೋರಾಟಗಾರರು. ಕಾಲಾಪಾನಿ ಶಿಕ್ಷೆ ಅನುಭವಿಸಿದವರು ಸ್ವಾತಂತ್ರ ಹೋರಾಟಗಾರರು. ಪುಣೆಯ ಪ್ಯಾಲೇಸ್ ನಲ್ಲಿ ಇದ್ದವರು ಸ್ವತಂತ್ರ ಹೋರಾಟಗಾರರಾಗಲು ಸಾಧ್ಯವಿಲ್ಲ. ಕ್ಷಾತ್ರ ಗುಣ ಇಲ್ಲದಿದ್ದರೆ ಪ್ರಪಂಚದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಉಡುಪಿಯಲ್ಲಿ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು. ಅಹಿಂಸೆ ಉಪವಾಸದಿಂದ ದೇಶ ಸ್ವತಂತ್ರವಾಗಲು ಸಾಧ್ಯವಿಲ್ಲ ಎಂದ ಅವರು, ವಿಶ್ವದ 63 ದೇಶಗಳು ಸ್ವತಂತ್ರವಾದದ್ದು ಕ್ರಾಂತಿಯಿಂದ. ಪಾಠದಲ್ಲಿ ನಮ್ಮ ಮೇಲಿನ ಆಕ್ರಮಣದ ಬಗ್ಗೆ ಮಾತ್ರ ಓದುತ್ತೇವೆ. ನಮ್ಮ ಪಾಠಗಳಲ್ಲಿ ಡೆಲ್ಲಿ ಸುಲ್ತಾನರು ಮೊಘಲರು ಮಾತ್ರ ಇದ್ದಾರೆ. ಮೊಘಲರು ಬರುವ ಮೊದಲು ಭಾರತಕ್ಕೆ ಇತಿಹಾಸವೇ ಇಲ್ಲವೇ? ಚೋಳರು, ಚೇರರು, ಗುಪ್ತರು, ರಾಷ್ಟ್ರಕೂಟರು ,ಕದಂಬರು, ಹೊಯ್ಸಳರು, ಪೇಶ್ವೆಯರನ್ನು ನಾವು ಮರೆಯೇ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.
ತ್ರಿವರ್ಣ ಧ್ವಜದಲ್ಲಿ ಇಂದು ಗಾಂಧೀಜಿ ಚರಕ ಇರುತ್ತಿತ್ತು. ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಹಾಕಿಸಿದ್ದು ವೀರ ಸಾವರ್ಕರ್. ಅಶೋಕ ಚಕ್ರ ಮುಂದೊಂದು ದಿನ ಸುದರ್ಶನ ಚಕ್ರ ಆಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಭಾಷಣದಲ್ಲಿ ಹೇಳಿದ್ದಾರೆ.
PublicNext
28/05/2022 06:49 pm