ಕೊಲ್ಲೂರು: ತ್ರಿದಿನ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,ಶುಕ್ರವಾರ ರಾತ್ರಿ ಉಡುಪಿಗೆ ಆಗಮಿಸಿದ್ದಾರೆ.
ಇಂದು ಶನಿವಾರ ಬೆಳಿಗ್ಗೆ ಸಚಿವೆ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿದರು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಳದ ವಿಶೇಷ ಪೂಜೆಯಲ್ಲಿ ಭಾಗಿಯಾದರು.
ದೇವಳದ ಪ್ರಧಾನ ಅರ್ಚಕರಾದ ಗೋವಿಂದ ಅಡಿಗ ಮತ್ತು ನರಸಿಂಹ ಅಡಿಗ ನೇತ್ರತ್ವದಲ್ಲಿ ವಿಶೇಷ ಪೂಜೆ ನಡೆಯಿತು.ನಿರ್ಮಲಾಗೆ ಸಚಿವೆ ಶೋಭಾ ಕರಂದ್ಲಾಜೆ ಸಾಥ್ ನೀಡಿದ್ದಾರೆ.ಇದಕ್ಕೂ ಮುನ್ನ ದೇವಳದ ಆಡಳಿತ ಮಂಡಳಿ ಪೂರ್ಣ ಕುಂಭ ಸ್ವಾಗತದೊಂದಿಗೆ ಸಚಿವರನ್ನು ಬರಮಾಡಿಕೊಂಡಿತು.
PublicNext
14/05/2022 11:46 am