ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಪ್ರವಾಸ: ಉಡುಪಿಗೆ ಆಗಮನ

ಮಣಿಪಾಲ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಶುಕ್ರವಾರ ರಾತ್ರಿ ಮಣಿಪಾಲಕ್ಕೆ ಆಗಮಿಸಿದ್ದಾರೆ.ಇಂದು ಉಡುಪಿಯಲ್ಲಿ ಮಣಿಪಾಲದ ಟಿ.ಎ. ಪೈ ಮ್ಯಾನೇಜ್ ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟ್ಯಾಪ್ಮಿ)ನಲ್ಲಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಇದಕ್ಕೆ ಮುನ್ನ ಕುಕ್ಕಿಕಟ್ಟೆಯಲ್ಲಿ ಶ್ರೀವಿಶ್ವೇಶ ತೀರ್ಥ ಧಾಮವನ್ನು ಉದ್ಘಾಟಿಸಲಿರುವರು.

ಇದಲ್ಲದೆ ಕೃಷ್ಣಮಠ ಮತ್ತು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ಕಾರ್ಯಕ್ರಮವೂ ಇದೆ. ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಇವರ ರಾಜ್ಯ ಸಭಾ ಸದಸ್ಯತ್ವ ಅವಧಿ ಮುಗಿಯುತ್ತಿದ್ದು, ಮತ್ತೂಮ್ಮೆ ಆಯ್ಕೆಯಾಗುವುದು ಬಹುತೇಕ ಖಚಿತ. ಈ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ರಾಜಕೀಯ ಮಹತ್ವವೂ ಇದೆ.

Edited By : PublicNext Desk
Kshetra Samachara

Kshetra Samachara

14/05/2022 07:09 am

Cinque Terre

9.7 K

Cinque Terre

1

ಸಂಬಂಧಿತ ಸುದ್ದಿ