ಉಡುಪಿ: ಭ್ರಷ್ಟಾಚಾರ ನೆಹರೂ ಕಾಲದಿಂದಲೂ ಇದೆ, ಅದೇನೂ ಹೊಸತಲ್ಲ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಹೇಳಿದ್ದಾರೆ.
ಪೇಜಾವರ ಸ್ಮೃತಿ ವನದ ಭೂಮಿಪೂಜೆಗೆ ಆಗಮಿಸಿದ ಸಚಿವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಭ್ರಷ್ಟಾಚಾರ ಈಗ ಪ್ರಾರಂಭವಾಗಿದ್ದಲ್ಲ, ಪ್ರಜಾಪ್ರಭುತ್ವ ಬಂದಾಗಿನಿಂದ ನೆಹರೂ ಕಾಲದಿಂದಲೂ ಇದೆ. ಈಗ ಸಣ್ಣ ವಿಷಯಕ್ಕೂ ಹೆಚ್ಚು ಪ್ರಚಾರ ಸಿಗುತ್ತಿದೆ. ನಾನಂತೂ ಭ್ರಷ್ಟಾಚಾರವನ್ನು ಬೆಂಬಲಿಸುವುದಿಲ್ಲ ಎಂದರು.
ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು ಎಂದ ಸಚಿವರು, ಸಂಘಟನೆ ಬೆಳೆಯುತ್ತಾ ಇರುತ್ತದೆ. ಪಕ್ಷಕ್ಕೆ ಜನ ಬರುತ್ತಾ ಇರುತ್ತಾರೆ. ಅವರು ಯಾವ ಉದ್ದೇಶದಿಂದ ಬರುತ್ತಾರೆ ಎಂಬುದು ಅಪ್ರಸ್ತುತ. ಬಿಜೆಪಿ ಅಧಿಕಾರದಲ್ಲಿದೆ ಎಂಬ ಕಾರಣಕ್ಕೂ ಬರಬಹುದು.ಬಂದವರನ್ನು ನಾವು ಸೇರಿಸಿಕೊಳ್ಖುತ್ತೇವೆ ಎಂದು ಸಚಿವರು ಹೇಳಿದ್ದಾರೆ.
Kshetra Samachara
07/05/2022 07:08 pm