ಕುಂದಾಪುರ: ಕುಂದಾಪುರದಲ್ಲಿ ಇವತ್ತು ಕೆಡಿಪಿ ಸಭೆ ನಡೆಯಿತು.ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾದರು.ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಜನರ ಸಮಸ್ಯೆ ಮತ್ತು ಅಹವಾಲುಗಳಿಗೆ ತಕ್ಷಣ ಸ್ಪಂದಿಸಬೇಕು.ಕೆಲವು ಅಧಿಕಾರಿಗಳು ಜನರ ಸಮಸ್ಯೆಯನ್ನು ನಿರ್ಲಕ್ಷ ಮಾಡುತ್ತಾರೆ ಎಂಬ ದೂರುಗಳಿವೆ.ಇನ್ನು ಮುಂದೆ ಇದು ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡ ಸುಕುಮಾರ್ ಶೆಟ್ಟಿ ,ನೀವು ಯಾರ ಫೋನನ್ನೂ ಅಟೆಂಡ್ ಮಾಡುವುದಿಲ್ಲ.ಪತ್ರಕರ್ತರು ಮತ್ತು ಜನರು ಈ ಬಗ್ಗೆ ದೂರು ನೀಡಿದ್ದಾರೆ.
ಇನ್ನು ಮುಂದೆ ಹೀಗಾಗಬಾರದು ಎಂದು ಖಾರವಾಗಿಯೇ ಹೇಳಿದಾಗ ,ಅಧಿಕಾರಿ ಆಯ್ತು ಎಂಬಂತೆ ತಲೆ ಆಡಿಸಿದ ಪ್ರಸಂಗ ನಡೆಯಿತು.
Kshetra Samachara
05/05/2022 08:38 pm