ಉಡುಪಿ: ಹಿಜಾಬ್ ನಿಂದ ಪ್ರಾರಂಭಗೊಂಡ ಧರ್ಮ ಸಂಘರ್ಷ ವ್ಯಾಪಾರ ಬಹಿಷ್ಕಾರಕ್ಕೆ ಮುಂದುವರೆದು ಬಳಿಕ ಕೊಲೆ ಕೃತ್ಯ ತನಕ ತಲುಪಿದೆ.ಹಿಜಾಬ್ ಕುರಿತು ಪಾಕಿಸ್ತಾನದವರು ,ಅಲ್ ಖೈದಾದವರು ಮಾತಾಡ್ತಾರೆ.ಇಲ್ಲಿನ ಬಡ ಹೆಣ್ಣುಮಕ್ಕಳನ್ನು ಮುಂದೆ ತಳ್ಳಿ ಇಷ್ಟೆಲ್ಲ ರಾದ್ಧಾಂತಗಳಾಗಿವೆ.ಇದು ಬೇಕಿತ್ತೆ ಎಂಬುದನ್ನು ಆ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವೆ ,ಮುಸ್ಕಾನ್ ವಿಷಯದಲ್ಲಿ ಅಲ್ ಖೈದಾ ಮಾತನಾಡುತ್ತಿರುವುದು ಆತಂಕದ ವಿಷಯ.ಇವೆಲ್ಲದರ ಸಮಗ್ರ ತನಿಖೆ ಆಗಬೇಕಿದೆ.ಹರ್ಷ ತನಿಖೆಯನ್ನು ಈಗಾಗಲೇ NIAಗೆ ವಹಿಸಲಾಗಿದೆ.ಇದೇ ಮಾದರಿಯಲ್ಲಿ ಹಿಜಾಬ್ ಗೆ ಬೆಂಬಲ ನೀಡಿರುವ ಅಲ್ ಖೈದಾದ ಹಿಂದೆ ಯಾವ ಸಂಘಟನೆ ಇದೆ ಎಂಬುದರ ಸಮಗ್ರ ತನಿಖೆಯಾಗಬೇಕು ಮತ್ತು ಇದರ ಹಿಂದೆ ಇರುವವರಿಗೆ ಶಿಕ್ಷೆ ಆಗಬೇಕು ಎಂದು ಸಚಿವರು ಹೇಳಿದ್ದಾರೆ.
PublicNext
08/04/2022 04:45 pm