ಬೈಂದೂರು: ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ವಿಚಾರವಾಗಿ ನಡೆಯುತ್ತಿರುವ ಚರ್ಚೆಗೆ ಬೈಂದೂರಿನಲ್ಲಿ ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆಯಲ್ಲಿ ಮೈಕ್ ಬಳಸಲು ನಿಬಂಧನೆಗಳಿವೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪರವಾನಿಗೆ ಪಡೆದು ಬಳಸಬಹುದು. ಆದರೆ ಧ್ವನಿಯು 50 ಅಡಿಗಿಂತ ಜಾಸ್ತಿ ಹೋಗಬಾರದೆಂದು ನಿಯಮವಿದೆ. ಆ ನಿಬಂಧನೆಗೊಳಪಟ್ಟು ಯಾರು ಬೇಕಾದರೂ ಧ್ವನಿವರ್ದಕ ಬಳಸಬಹುದು ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಇನ್ನು ಹಲಾಲ್, ಜಟ್ಕಾ ವಿಚಾರವಾಗಿ ಮಾತನಾಡಿದ ಸಚಿವರು, ಈ ವಿಷಯದಲ್ಲಿ ಜನರ ತೀರ್ಮಾನವೇ ಮುಖ್ಯ. ಜನರ ಅಭಿಪ್ರಾಯ, ಅವರ ಇಷ್ಟದಂತೆ ಬಳಸಬಹುದು. ಕಾಮಾಲೆ ಕಣ್ಣಿನವರಿಗೆ ಜಗತ್ತು ಹಳದಿ ಎಂಬಂತಾಗಿದೆ. ಕಾಂಗ್ರೆಸ್ ಪಕ್ಷದ ಪರಿಸ್ಥಿತಿ. ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿ ಪಕ್ಷದ ಮೇಲೆ ಹಾಕುತ್ತಿದ್ದಾರೆ. ಆಹಾರ ಪದಾರ್ಥ ವಿಚಾರದಲ್ಲಿ ಜನರೇ ತೀರ್ಮಾನಿಸಬೇಕು. ಜನರೇ ಬೇಡ ಎಂದರೆ ನಾವು ಒತ್ತಾಯ ಮಾಡೋಕಾಗಲ್ಲ. ಸಿದ್ದರಾಮಯ್ಯ ಅವರಿಗೆ ನಿಂತ ನೆಲ ಕುಸಿಯವ ಭಾವನೆ ಬಂದಿದೆ ಎಂದ ಸಚಿವರು, ಅವರಿಗೆ ಶಕ್ತಿ ಕ್ಷೀಣವಾಗುತ್ತಿರುವ ಬಗ್ಗೆ ಭಯವಿದೆ. ಡಿಕೆ ಶಿವಕುಮಾರ್ ತಮ್ಮ ಸ್ಥಾನ ಆಕ್ರಮಿಸಿಕೊಳ್ಳುತ್ತಾರೆಂಬ ಭಯವಿದೆ. ತಾನು ಪ್ರಭಾವಿ ಎಂದು ತೋರಿಸಲು ಅವರು ಬಿಜೆಪಿ ಮೇಲೆ ಪ್ರಹಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
PublicNext
04/04/2022 05:48 pm