ಕಾರ್ಕಳ: ಹಿಜಾಬ್ ವಿವಾದ ರಾಜ್ಯದಲ್ಲಿ ಆರಂಭ ಮಾಡಿದ್ದು ಯಾರು?ಹರ್ಷ ಕೊಲೆಯಾದಾಗ ಕಾಂಗ್ರೆಸ್ ಉಗ್ರವಾಗಿ ಯಾಕೆ ಖಂಡಿಸಿಲ್ಲ?ದೇಶದಲ್ಲಿ ನಿರ್ನಾಮವಾಗಿರುವ ಕಾಂಗ್ರೆಸ್ ಹಿಜಾಬ್, ಹಲಾಲ್, ಮತ್ತು ರಾಷ್ಟ್ರ ಧ್ವಜದ ಬಗ್ಗೆ ಚರ್ಚೆ ಮಾಡುತ್ತಿದೆ.
ಮುಸಲ್ಮಾನರನ್ನು ತೃಪ್ತಿ ಪಡಿಸುವ ಪ್ರಯತ್ನ ಒಳ್ಳೆಯದಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಮಾತನಾಡಿದ ಸಚಿವರು, ನಾವು ಹುಟ್ಟಿದಾಗಿನಿಂದ ಹಿಂದುತ್ವದವರು.ರಾಷ್ಟ್ರಭಕ್ತಮುಸಲ್ಮಾನರು,ಸ್ವಾತಂತ್ರ ಹೋರಾಟಗಾರ ಮುಸಲ್ಮಾನರನ್ನು ನಾವು ಗೌರವಿಸುತ್ತೇವೆ.ಇಲ್ಲಿ ಅನ್ನ ತಿಂದು ಪಾಕಿಸ್ತಾನಕ್ಕೆ ಜಿಂದಾಬಾದ್ ಅನ್ನುವವರನ್ನು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಹರ್ಷ ಕೊಲೆಯ ಎನ್ ಐ ಎ ತನಿಖೆಯಲ್ಲಿ ನ್ಯಾಯ ಸಿಗುವ ನಂಬಿಕೆಯಿದೆ.ಹಿಂದುಗಡೆಯಿಂದ ಬಂದು ಕೊಚ್ಚಿ ಹೋದವರನ್ನು ಗಂಡಸರು ಎಂದು ಕರೆಯಲು ಸಾಧ್ಯವೇ?ಚುನಾವಣೆ ಬಂದಾಗ ನಾವು ಇದಕ್ಕೆಲ್ಲ ಉತ್ತರ ಕೊಡುತ್ತೇವೆ.
ಲೋಕಸಭಾ ಚುನಾವಣೆಯಲ್ಲಿ ಒಂದೂ ಸೀಟು ಬರಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣೆಗೆ ಮುನ್ನ ನಾವು ಏನನ್ನು ಕೊಚ್ಚಿಕೊಳ್ಳುವುದಿಲ್ಲ. ನಾನೇ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತರು.ಉಪಚುನಾವಣೆ, ಗ್ರಾಮ ಪಂಚಾಯತಿ ಎಲ್ಲವನ್ನು ಬಿಜೆಪಿ ಗೆದ್ದುಕೊಂಡಿತು. ಕಾಂಗ್ರೆಸ್ ಬರೀ ಘೋಷಣೆಯನ್ನು ಮಾಡುತ್ತದೆ,ಬಿಜೆಪಿ ಸಾಧನೆಯನ್ನು ಮಾಡುತ್ತದೆ.ರಾಜ್ಯದಲ್ಲಿ 150ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
Kshetra Samachara
03/04/2022 02:38 pm