ಉಡುಪಿ: ರಾಜ್ಯ ಸರಕಾರದ ಧರ್ಮ ತಾರತಮ್ಯ, ಅರಾಜಕತೆ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ವಿರುದ್ಧ ಎಸ್ಡಿಪಿಐ ಇವತ್ತು ಪ್ರತಿಭಟನೆ ಹಮ್ಮಿಕೊಂಡಿತು. ಉಡುಪಿಯ ಅಜ್ಜರಕಾಡುವಿನಲ್ಲಿರುವ ಹುತಾತ್ಮ ಸೈನಿಕ ಸ್ಮಾರಕದ ಎದುರು ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. '40 ಪರ್ಸೆಂಟ್ ಕಮಿಷನ್ ಸರಕಾರಕ್ಕೆ ಧಿಕ್ಕಾರ', 'ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುತ್ತಿರುವ ಸರಕಾರ', 'ಒಂದು ಕೋಮಿನ ವಿರುದ್ಧ ದ್ವೇಷ ಮಾಡುವ ಸರಕಾರ' ಇತ್ಯಾದಿ ಭಿತ್ತಿಪತ್ರಗಳನ್ನು ಕಾರ್ಯಕರ್ತರು ಪ್ರತಿಭಟನೆ ಸಂದರ್ಭ ಪ್ರದರ್ಶಿಸಿದರು.
ಅಲ್ಪಸಂಖ್ಯಾತರಿಗೆ ನೀಡಲಾದ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಸರಕಾರದ ವಿರುದ್ಧ ಪ್ರತಿಭಟನೆ ನಿರಂತರವಾಗಿ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.
Kshetra Samachara
01/04/2022 07:39 pm