ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ಹಿಜಾಬ್ ಹೋರಾಟದ ಹಿಂದಿನ ಷಡ್ಯಂತ್ರವನ್ನು ಎನ್‌ಐಎಗೆ ವಹಿಸಿ'

ಉಡುಪಿ: ಹಿಜಾಬ್ ಹೋರಾಟ ಅಂದುಕೊಂಡಷ್ಟು ಸರಳವಾಗಿಲ್ಲ. ಈ ಹೋರಾಟದ ಹಿಂದಿನ ಷಡ್ಯಂತ್ರವನ್ನು ಎನ್‌ಐಎ ಮೂಲಕ ತನಿಖೆ ನಡೆಸಿದರೆ ಸತ್ಯಾಂಶ ಬಯಲಿಗೆ ಬರುತ್ತದೆ ಎಂದು ಹಿಂದೂ ಸಂಘಟನೆ ಮುಖಂಡರು ಹೇಳಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿರುವ ಹಿಂದೂ ಜಾಗರಣ ವೇದಿಕೆ ಮುಖಂಡರು, ಹಿಜಾಬ್ ಗಲಾಟೆ ನಡೆಯುತ್ತಿರುವಾಗ ಕುಂದಾಪುರದಲ್ಲಿ ಮುಸ್ಲಿಂ ಸಂಘಟನೆ ಕಾರ್ಯಕರ್ತರಿಬ್ಬರು ಗಲಭೆ ನಡೆಸಲು ಮಾರಕಾಸ್ತ್ರಗಳೊಂದಿಗೆ ಬಂದಿದ್ದರು. ಕೋಮು ಗಲಭೆ ನಡೆಸುವುದು ಅವರ ಉದ್ದೇಶವಾಗಿತ್ತು. ಇನ್ನು ಉಡುಪಿಯ ಸರಕಾರಿ ಕಾಲೇಜಿನ ಆರು ಜನ ವಿದ್ಯಾರ್ಥಿನಿಯರು ಅಮಾಯಕರಲ್ಲ. ಅವರು ಸಂಘಟನೆಗಳ ಸಂಪರ್ಕದಲ್ಲಿದ್ದು, ಈ ಹೋರಾಟಕ್ಕೆ ಇಳಿದಿದ್ದಾರೆ. ಒಟ್ಟಾರೆ ಇಡೀ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

Edited By : Nagesh Gaonkar
PublicNext

PublicNext

14/02/2022 08:35 pm

Cinque Terre

52.4 K

Cinque Terre

10

ಸಂಬಂಧಿತ ಸುದ್ದಿ