ಕಾರ್ಕಳ: ಕೆಡಿಪಿ ಸಭೆಯಲ್ಲಿ ಅಸಮರ್ಪಕ ಮಾಹಿತಿ ನೀಡಿದ ಜಲಜೀವನ್ ವಿಭಾಗದ ಅಧಿಕಾರಿಯ ವಿರುದ್ಧ ಗರಂ ಆದ ಸಚಿವ ಸುನಿಲ್ ಕುಮಾರ್, ನೀವು ಕೆಲ್ಸ ಮಾಡೋಕೆ ಅನ್ ಫಿಟ್ ಇದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಕೆಡಿಪಿ ಸಭೆಯಲ್ಲಿ, ಜಲಜೀವನ್ ಗೆ ಸಂಬಂಧಿಸಿ ಸಚಿವರು ಆ ಇಲಾಖೆಯ ಅಧಿಕಾರಿಯಿಂದ ಮಾಹಿತಿ ಬಯಸಿದ್ದರು. ಇದೇ ವೇಳೆ ಅಧಿಕಾರಿ ನೀಡಿದ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಇದಕ್ಕೆ ಗರಂ ಆದ ಸಚಿವರು ,ನನಗೆ ಪ್ರಾಕ್ಟಿಕಲ್ ಏನಾಗಿದೆ ಅದು ಬೇಕು. ಕಾಲಹರಣಕ್ಕೆ ಸಭೆಗೆ ಬರಬೇಡಿ. ಸಭೆಗೆ ಬರುವಾಗ ವಾಸ್ತವಾಂಶ ವರದಿ ತನ್ನಿ. ಪೂರ್ಣ ಮಾಹಿತಿ ನನಗೆ ಬೇಕು. ಯಾಕೆ ತಪ್ಪು ರಿಪೋರ್ಟ್ ನೀಡುತ್ತೀರಿ? ನೀವು ಇಲಾಖೆಯ ಕೆಲ್ಸ ಮಾಡೋಕೆ ಆನ್ ಫಿಟ್ ಇದ್ದೀರಿ ಅಂತ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Kshetra Samachara
29/01/2022 05:43 pm