ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಂಬೇಡ್ಕರ್‌ಗೆ ಅವಮಾನ- ದಲಿತ ಸಂಘಟನೆಗಳಿಂದ ಪ್ರತಿಭಟನೆ!

ಉಡುಪಿ: ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಇರಿಸಲಾಗಿದ್ದ ಡಾ. ಬಿ.ಆರ್‌. ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿದ ರಾಯಚೂರಿನ ನ್ಯಾಯಾಧೀಶರ ವಿರುದ್ಧ ಉಡುಪಿಯಲ್ಲಿ ನಿನ್ನೆ (ಗುರುವಾರ) ಪ್ರತಿಭಟನೆ ನಡೆಯಿತು. ದಲಿತ ಸಂಘರ್ಷ ಸಮಿತಿಯಿಂದ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕ ಎದುರು ಪ್ರತಿಭಟನೆ ನಡೆಯಿತು.

ಸಂವಿಧಾನ ಶಿಲ್ಫಿಗೆ ಅವಮಾನ ಮಾಡಿದ ರಾಯಚೂರಿನ ಮನುವಾದಿ, ಅಂಬೇಡ್ಕರ್ ವಿರೋಧಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ನೌಕರಿಯಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ದಸಂಸದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ನ್ಯಾಯಾಧೀಶರಿಗೆ ಇದು ಶೋಭೆ ತರುವ ಕೃತ್ಯ ಅಲ್ಲ.ಸಂವಿಧಾನ ಓದಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರಿಗೆ ಸಂವಿಧಾನ ಶಿಲ್ಪಿಗೆ ಗೌರವ ಕೊಡಬೇಕು ಎಂಬ ವಿಷಯ ಗೊತ್ತಿರಲಿಲ್ಲವೇ? ಈ ಮನುವಾದಿ ನ್ಯಾಯಾಧೀಶರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

29/01/2022 11:11 am

Cinque Terre

8.99 K

Cinque Terre

0

ಸಂಬಂಧಿತ ಸುದ್ದಿ