ನೀರು ಮಾರ್ಗ:ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಹೃದಯದಲ್ಲಿಟ್ಟು ಪೂಜಿಸಬೇಕಿದೆ. ಅವರ ತತ್ವಾದರ್ಶಗಳನ್ನು ಮಕ್ಕಳಿಗೆ ಕಲಿಸಬೇಕು. ರಾಜಕೀಯವಾಗಿ ಗುರುಗಳನ್ನು ಬಳಸಬಾರದು. ಈ ಮಂದಿರದ ನಿರ್ಮಾಣಕ್ಕೆ ಎಲ್ಲಾ ರೀತಿಯಲ್ಲಿಯೂ ತೊಡಗಿಸಿಕೊಂಡಿದ್ದೇನೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ಹೇಳಿದ್ದಾರೆ
ಅವರು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ನೀರುಮಾರ್ಗದ ಸುಬ್ರಹ್ಮಣ್ಯ ನಗರದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿದ ಗುರುಮಂದಿರದಲ್ಲಿ ಪರಮಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಶಿಲಾಮೂರ್ತಿ ಪ್ರತಿಷ್ಟೆ ಮತ್ತು ಪ್ರತಿಷ್ಟಾ ಕಲಶೋತ್ಸವದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಗಾಯಕ ಸಂದೇಶ್ ನಿರುಮಾರ್ಗ ಅವರನ್ನು ಸನ್ಮಾನಿಸಲಾಯಿತು.
ಅನೇಕ ಗಣ್ಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
23/01/2022 05:23 pm