ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರಧಾನಿಗೆ ಭದ್ರತಾ ಲೋಪ; ಕಾಂಗ್ರೆಸ್ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ, ವಾಕ್ಸಮರ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್‌ ಭೇಟಿ ಸಂದರ್ಭ ಭದ್ರತಾ ವೈಫಲ್ಯವಾಗಿರುವ ಹಿನ್ನೆಲೆಯಲ್ಲಿ ದ.ಕ. ಕಾಂಗ್ರೆಸ್ ಕಚೇರಿ ಮುಂಭಾಗ ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರೂ ಸ್ಥಳದಲ್ಲಿ ಜಮಾಯಿಸಿ ಬಿಜೆಪಿಗರು ಅಲ್ಲಿಂದ ಹೋಗಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರತಿಭಟನೆ ನಡೆಸಿದ್ದು, ಧಿಕ್ಕಾರ ಕೂಗುತ್ತಾ ಕಾಂಗ್ರೆಸ್ ಕಚೇರಿ ಮುಂದೆ ಬಂದಿದೆ. ಈ ವೇಳೆ ಪ್ರತಿಭಟನಾಕಾರರ ನಡೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತ ಲಾರೆನ್ಸ್ ಕಾಂಗ್ರೆಸ್ ಧ್ವಜ ಹಾರಿಸಿದ್ದಾರೆ.

ಆಗ ಬಿಜೆಪಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತ‌ನ ನಡುವೆ ವಾಗ್ವಾದ ನಡೆದಿದೆ. ಅಷ್ಟರಲ್ಲಿ ಕಾಂಗ್ರೆಸ್ ನ ಇನ್ನಷ್ಟು ಕಾರ್ಯಕರ್ತರು ಧಾವಿಸಿ ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನಿಸಿ ಹಿಂದೆ ಕಳಿಸಿದ್ದಾರೆ. ಆ ಕೂಡಲೇ ಸ್ಥಳಕ್ಕೆ ಬಂದ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ತಾವೂ ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಹೇಳಿ ಕಾರ್ಯಕರ್ತರೊಂದಿಗೆ ಆಗಮಿಸಿದ್ದಾರೆ. ಆದರೆ, ಪೊಲೀಸರು ಅರ್ಧದಲ್ಲೇ ತಡೆದು ಅವರನ್ನು ಕದ್ರಿ ಠಾಣೆಗೆ ಕರೆದುಕೊಂಡು ಹೋದರು.

Edited By : Shivu K
Kshetra Samachara

Kshetra Samachara

06/01/2022 10:23 pm

Cinque Terre

4.5 K

Cinque Terre

2

ಸಂಬಂಧಿತ ಸುದ್ದಿ