ಕಾಪು: ಕಾಪು ಪುರಸಭೆಯ ಎರಡನೇ ಅವಧಿಯ ಚುನಾವಣೆಗೆ ಚಾಲನೆ ದೊರಕಿದ್ದು, ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಆರಂಭಗೊಂಡಿದೆ.
ಕಾಪು ಪುರಸಭೆಯ 23 ವಾರ್ಡ್‌ಗಳಿಗೆ 23 ಮತಗಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಇದಕ್ಕಾಗಿ ತಾಲೂಕು ಆಡಳಿತದ ವತಿಯಿಂದ 26 ಎಪಿಆರ್‌ಒ, 52 ಪಿಒ ಹಾಗೂ 26 ಡಿ ಗ್ರೂಪ್ ಸಿಬ್ಬಂದಿಯನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಕೈಪುಂಜಾಲು, ಪೊಲಿಪುಗುಡ್ಡೆ, ಕೊಂಬಗುಡ್ಡೆ ಹಾಗೂ ಅಹಮದಿ ಮೊಹಲ್ಲಾ ಅತೀ ಸೂಕ್ಷ ಮತಗಟ್ಟೆಗಳಾಗಿದ್ದು, 8 ಸೂಕ್ಷ್ಮ ಹಾಗೂ 11 ಸಾಮಾನ್ಯ ಮತಗಟ್ಟೆಗಳಿದ್ದು, ಚುನಾವಣೆ ಕರ್ತವ್ಯಕ್ಕೆ 77 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮತಯಂತ್ರ ಮೂಲಕ ಮತದಾನ ನಡೆಯುತ್ತಿದ್ದು, ಮತಯಂತ್ರದಲ್ಲಿ ಅಭ್ಯರ್ಥಿ ಭಾವಚಿತ್ರ ಜೋಡಿಸಲಾಗಿದೆ. ನೋಟಾ ಚಲಾವಣೆಗೂ ಅವಕಾಶ ನೀಡಲಾಗಿದೆ.
ಕಾಂಗ್ರೆಸ್, ಬಿಜೆಪಿ ತಲಾ 23 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜೆಡಿಎಸ್ 7, ಎಸ್‌ಡಿಪಿಐ 9, ವೆಲ್ಫೇರ್ ಪಾರ್ಟಿ ಇಂಡಿಯಾ 2, ಮೂವರು ಪಕ್ಷೇತರರು ಕಣದಲ್ಲಿದ್ದಾರೆ.
Kshetra Samachara
27/12/2021 10:46 am