ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಉಪ್ಪಿನಂಗಡಿ ಲಾಠಿಚಾರ್ಜ್ ಖಂಡಿಸಿ ಡಿ.17ರಂದು ಪಿಎಫ್ಐನಿಂದ ಎಸ್ಪಿ ಕಚೇರಿ ಮಾರ್ಚ್

ಮಂಗಳೂರು: ಬಂಧನಕ್ಕೊಳಗಾದ ಅಮಾಯಕ ಪಿಎಫ್ಐ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿರುವ ಪ್ರತಿಭಟನಾಕಾರರ ಮೇಲೆ ಹಿಗ್ಗಾಮುಗ್ಗಾ ಲಾಠಿಚಾರ್ಜ್ ನಡೆಸಿರುವ ಪೊಲೀಸರ ನಡೆ ಅಕ್ಷಮ್ಯ. ಈ ಲಾಠಿಚಾರ್ಜ್ ಖಂಡಿಸಿ, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಿ.17ರಂದು ಮಂಗಳೂರಿನ ಎಸ್ಪಿ ಕಚೇರಿಗೆ ಮಾರ್ಚ್ ಹಮ್ಮಿಕೊಳ್ಳಲಾಗುತ್ತದೆ ಎಂದು ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಪ್ರತಿಭಟನಾಕಾರರು ಬೆಳಗ್ಗಿನಿಂದಲೇ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೂ ಬಂಧಿತ ಮೂವರು ಅಮಾಯಕರಲ್ಲಿ ಓರ್ವನನ್ನು ಹೊರತುಪಡಿಸಿ ಮತ್ತಿಬ್ಬರನ್ನು ಬಂಧಮುಕ್ತಗೊಳಿಸಿರಲಿಲ್ಲ. ಆದ್ದರಿಂದ ಪ್ರತಿಭಟನೆಯನ್ನು ಕೈಬಿಟ್ಟ ಕಾರ್ಯಕರ್ತರು ರಾತ್ರಿಯಾದರೂ ಸಂಯಮ ಕಳೆದುಕೊಳ್ಳದೆ ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಪೊಲೀಸರು ರಾತ್ರಿ 9:30ರ ವೇಳೆಗೆ ಹಿಂಬದಿಯಿಂದ ಬಂದು ಏಕಾಏಕಿ ಲಾಠಿ ಪ್ರಹಾರ ಮಾಡಿದ್ದಾರೆ. ಲಾಠಿ ಏಟು ಬಿದ್ದ ಬಹುಪಾಲು ಮಂದಿಯ ತಲೆಗೆ ಪೆಟ್ಟು ಬಿದ್ದಿದೆ. ಇದು ಪೊಲೀಸರ ಪ್ರತೀಕಾರದ ಮನಸ್ಥಿತಿ ಬಿಂಬಿಸುತ್ತಿದೆ ಎಂದರು.

ಸಂಘ ಪರಿವಾರದ ನಾಯಕರು ಬಹಿರಂಗವಾಗಿ ಪೊಲೀಸರ ಬಗ್ಗೆ, ಅಧಿಕಾರಿಗಳ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ಬಾಯಿ ಮುಚ್ಚಿ ಕುಳಿತುಕೊಂಡಿರುವ ಪೊಲೀಸರು, ಒಂದು ಸಮುದಾಯದ ‌ಮೇಲೆ ದಾಳಿ‌ ನಡೆಸುತ್ತಿದ್ದಾರೆ. ಇದೀಗ ತಮ್ಮ ತಪ್ಪನ್ನು ಮುಚ್ಚಿ ಹಾಕಲು ಪೊಲೀಸರು ಎಂದಿನಂತೆ ತಮ್ಮ ಮೇಲೆಯೇ ಹಲ್ಲೆ ಎಂಬ ಕಟ್ಟುಕತೆ ಕಟ್ಟುತ್ತಿದ್ದಾರೆ. ಆದ್ದರಿಂದ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ತಕ್ಷಣ ಬಂಧಿತರಿಬ್ಬರನ್ನೂ ಬಿಡುಗಡೆ ಮಾಡಬೇಕೆಂದು ಎ.ಕೆ.ಅಶ್ರಫ್ ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

15/12/2021 03:23 pm

Cinque Terre

23.52 K

Cinque Terre

7

ಸಂಬಂಧಿತ ಸುದ್ದಿ