ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ರಾಜ್ಯ ಒಕ್ಕಲಿಗರ ಸಂಘ ಚುನಾವಣೆ; ಇತ್ತಂಡ ವಾಕ್ಸಮರ, ಹಲ್ಲೆ ಯತ್ನ; ಸಾರ್ವಜನಿಕರ ಬೇಸರ

ಸುಳ್ಯ: ರಾಜ್ಯ ಒಕ್ಕಲಿಗರ ಸಂಘ ಚುನಾವಣೆ ಈ ಬಾರಿ ಸುಳ್ಯದಲ್ಲಿ ರಂಗೇರಿದೆ. ಕುರುಂಜಿ ವೆಂಕಟರಮಣ ಗೌಡರ ಇಬ್ಬರೂ ಪುತ್ರರ ಸ್ಪರ್ಧೆ ಇದಕ್ಕೆಲ್ಲ ಕಾರಣ.

ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಭಾಗದಿಂದ ಒಟ್ಟು 3 ಮಂದಿ ಸ್ಪರ್ಧಿಗಳಿದ್ದು, ಇಂದು ಸುಳ್ಯದ ಜ್ಯೂನಿಯರ್ ಕಾಲೇಜಿನಲ್ಲಿ ಮತದಾನ ನಡೆಯುತ್ತಿದ್ದ ಸಂದರ್ಭ ಡಾ.ಕೆ. ವಿ. ಚಿದಾನಂದ ಬಣದಲ್ಲಿ ಗುರುತಿಸಿಕೊಂಡಿರುವ ರಜತ್ ಅಡ್ಕಾರ್ ಮೇಲೆ ಹಲ್ಲೆ ನಡೆಸಲು ಡಾ.ರೇಣುಕಾಪ್ರಸಾದ್ ಕೆ. ವಿ. ಅವರ ಬಣದ ಎನ್. ಎ. ರಾಮಚಂದ್ರ ಯತ್ನಿಸಿದರೆಂದು ಹೇಳಲಾಗಿದೆ.

ಇದರಿಂದ ರೊಚ್ಚಿಗೆದ್ದ ಎರಡೂ ಬಣದವರು ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ. ಪೊಲೀಸರು ಧಾವಿಸಿ, ಎರಡೂ ಗುಂಪುಗಳನ್ನು ಸ್ಥಳದಿಂದ ಹೊರಗೆ ಕಳುಹಿಸಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ಕಲಹದ ಹಂತಕ್ಕೆ ಬಂದಿರುವುದು ವಿಪರ್ಯಾಸ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

Edited By : Shivu K
Kshetra Samachara

Kshetra Samachara

12/12/2021 10:38 pm

Cinque Terre

18.08 K

Cinque Terre

5

ಸಂಬಂಧಿತ ಸುದ್ದಿ