ಕಾಪು: ಕೇಂದ್ರ ಸರಕಾರ ರೈತರಿಗೆ ಮಾರಕವಾಗುವ ಮೂರು ಕೃಷಿ ಕಾಯಿದೆಗಳನ್ನು ರದ್ದುಗೊಳಿಸಿದ್ದು, ಇದು ಕಾಂಗ್ರೆಸ್ ಸಹಿತ ಮತ್ತಿತರ ರಾಜಕೀಯ ಪಕ್ಷಗಳು, ರೈತ ಪರ ಸಂಘಟನೆಗಳು, ರೈತರು ಮತ್ತು ಹೋರಾಟಗಾರರ ಹೋರಾಟಕ್ಕೆ ಸಿಕ್ಕಿದ ದೊಡ್ಡ ಗೆಲುವು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬಣ್ಣಿಸಿದ್ದಾರೆ.
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಹುಟ್ಟುಹಬ್ಬದ ದಿನದಂದೇ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾವೆಲ್ಲರೂ ಜೊತೆಗೂಡಿ ನಡೆಸಿದ ಹೋರಾಟಕ್ಕೆ ಗೌರವ ನೀಡಿದೆ. ಇದರ ಹಿಂದೆ ಬಲಿದಾನಗೈದ ಕೃಷಿಕರನ್ನು, ಹೋರಾಟಗಾರರನ್ನು ಸ್ಮರಿಸುವುದಾಗಿ ಸೊರಕೆ ತಿಳಿಸಿದ್ದಾರೆ.
Kshetra Samachara
20/11/2021 09:34 am