ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಪ್ರಶಸ್ತಿಯೇ ಇಂದು ಸಾಧಕರನ್ನು ಹುಡುಕುತ್ತಾ ಬರುತ್ತಿದೆ"; ಪ್ರಮೋದ್ ರಿಂದ ಮೋದಿ ಗುಣಗಾನ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಬಹಿರಂಗವಾಗಿ ಗುಣಗಾನ ಮಾಡುವ ಮೂಲಕ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.

ಉಡುಪಿಯಲ್ಲಿ ನಿನ್ನೆ ಸಂಜೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಸಂದ ಪದ್ಮವಿಭೂಷಣ ಪ್ರಶಸ್ತಿಯ ಸ್ವಾಗತ‌ ‌ಸಮಾರಂಭದಲ್ಲಿ ಪ್ರಮೋದ್ ಈ ಮಾತು ಆಡಿದ್ದಾರೆ. ವೇದಿಕೆಯಲ್ಲಿ ಮಠಾಧೀಶರುಗಳು ಮತ್ತು ಶಾಸಕ ರಘುಪತಿ ಭಟ್ ಇದ್ದರು.

ಈ ವೇಳೆ ಮಾತನಾಡಿದ ಪ್ರಮೋದ್, ಪದ್ಮವಿಭೂಷಣ ಇಂದು ಸ್ವಾಮೀಜಿಯವರನ್ನು ಹುಡುಕಿಕೊಂಡು ಬಂದಿದೆ.

ಹಿಂದೆಲ್ಲ ಅರ್ಜಿ ಹಾಕಿದವರಿಗೆ ಕೊಡುವ ಕ್ರಮವಿತ್ತು. ನರೇಂದ್ರ ಮೋದಿಯವರ ಸರಕಾರ ಬಂದ ಮೇಲೆ ಪ್ರಶಸ್ತಿಯೇ ಸಾಧಕರನ್ನು ಹುಡುಕಿಕೊಂಡು ಬರುವಂತಹ ಸಂದರ್ಭ ಬಂದಿದೆ.

ಗುಣಕ್ಕೆ ಮತ್ಸರ ಇಲ್ಲ. ನಾನು ವಿರೋಧ ಪಕ್ಷದಲ್ಲಿದ್ದರೂ ಕೂಡ ಅವರ ಒಳ್ಳೆಯ ಕೆಲಸಗಳನ್ನು ಶ್ಲಾಘಿಸಲೇಬೇಕು ಎಂದರು.

ಪ್ರಮೋದ್ ಮಧ್ವರಾಜ್ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಜೊತೆ ಅಂತರ ಕಾಯ್ದುಕೊಂಡೇ ಬರುತ್ತಿದ್ದಾರೆ. ಇದೇ ಹೊತ್ತಿಗೆ ಅವರಾಡಿದ ಈ ಮಾತು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Edited By : Shivu K
Kshetra Samachara

Kshetra Samachara

12/11/2021 02:21 pm

Cinque Terre

8.96 K

Cinque Terre

1

ಸಂಬಂಧಿತ ಸುದ್ದಿ