ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೂಲಂಕುಶವಾಗಿ ಪರಿಶೀಲಿಸಿ ಕಾಮಗಾರಿಗಳಿಗೆ ಅನುಮತಿ ನೀಡಲು ಮೂಡಾ ಅಧಿಕಾರಿಗಳಿಗೆ ಸೂಚನೆ

ಮಂಗಳೂರು: ಮಹಾನಗರದಲ್ಲಿ ಹಲವು ವರ್ಷಗಳ‌ ಹಿಂದೆ ರಾಜಕಾಲುವೆಗಳನ್ನು ಒತ್ತುವರಿ ಮಾಡಿ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿದರಿಂದ ಕೃತಕ ನೆರೆ ಸೃಷ್ಟಿಯಾಗಿ ನಾಗರಿಕರಿಗೆ ಪ್ರತಿ ವರ್ಷ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಇನ್ನು ಹಾಗೆ ಆಗಬಾರದು. ಮೂಡಾದಿಂದ ಅಧಿಕಾರಿಗಳು ಲೇಔಟ್ ಅಥವಾ ಇತರ ನಿರ್ಮಾಣ ಕಾಮಗಾರಿಗೆ ಅನುಮತಿ‌ ನೀಡುವ ಮೊದಲೇ ಕೂಲಂಕುಷವಾಗಿ ಪರಿಶೀಲಿಸಿಯೇ ಅನುಮತಿ ಕೊಡಬೇಕು. ಬಫರ್ ಝೋನ್ ಅಥವಾ ಅತಿಕ್ರಮಣ ಮಾಡಿ ಕಟ್ಟಡ, ಲೇಔಟ್ ಮಾಡಲು ಅವಕಾಶ ಕೊಡಬಾರದು ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಹೇಳಿದ್ದಾರೆ.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಮೂಡಾ ಚೇರ್ ಮೆನ್ ರವಿಶಂಕರ್ ಮಿಜಾರ್, ಮೂಡಾ ಕಮಿಷನರ್ ಭಾಸ್ಕರ್ ಅವರು ಶಾಸಕ ಡಾ.ಭರತ್ ಶೆಟ್ಟಿ ಅವರು ಹೇಳಿದ ವಿಷಯವನ್ನು ಸಮ್ಮಿತಿಸಿದರು. ಮೂಡಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ನಾಗರಿಕರ ದೂರುಗಳು ಬಂದಿದ್ದೇಯೋ ಅಲ್ಲೆಲ್ಲ ಕಾರ್ಯಾಚಾರಣೆ ಮಾಡಲು ನಿರ್ಧರಿಸಿ ಅಧಿಕಾರಿಗಳಿಗೆ ಸೂಚಿಸಲಾಯಿತು.

Edited By : PublicNext Desk
Kshetra Samachara

Kshetra Samachara

09/11/2021 08:31 pm

Cinque Terre

2.55 K

Cinque Terre

0

ಸಂಬಂಧಿತ ಸುದ್ದಿ