ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಇದು ಸಂಘಟಿತ ಪ್ರಯತ್ನದ ಫಲ,ಇನ್ನು ಹಾನಗಲ್ ನಲ್ಲಿ ಸಣ್ಣಮಟ್ಟದ ಸೋಲಾಗಿದೆ: ನಳೀನ್ ಕುಮಾರ್ ಕಟೀಲ್

ಮಂಗಳೂರು: ಸಿಂದಗಿ ಹಾನಗಲ್ ಉಪಚುನಾವಣೆ ಫಲಿತಾಂಶ ಕುರಿತಂತೆ ಮಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಂದಗಿಯಲ್ಲಿ ಬಿಜೆಪಿ ಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಇದಕ್ಕಾಗಿ ನಾನು ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಸಂಘಟಿತ ಪ್ರಯತ್ನದ ಫಲ. ಇನ್ನು ಹಾನಗಲ್ ನಲ್ಲಿ ಸಣ್ಣಮಟ್ಟದ ಸೋಲಾಗಿದೆ. ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತೇವೆ. ಮುಂದಿನ ಚುನಾವಣೆಗೆ ಇನ್ನಷ್ಟು ಹೋರಾಟ ಮಾಡುತ್ತೇವೆ. ಮತದಾರ ಕೊಟ್ಟ ತೀರ್ಪಿಗೆ ತಲೆಬಾಗುತ್ತೇವೆ.

ಹಾನಗಲ್ ಕ್ಷೇತ್ರದ ಸೋಲು ಮುಖ್ಯಮಂತ್ರಿಗೆ ಹಿನ್ನಡೆಯಲ್ಲ. ಅವರ ಕ್ಷೇತ್ರ ಅಂತಾನೂ ಇಲ್ಲ. ಅಲ್ಲಿನ ಮತದಾರ ಆಮಿಷಕ್ಕೆ ಒಳಗಾಗಿದ್ದಾನೆ. ಈ ಹಿನ್ನಲೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಈ ಬಗ್ಗೆ ಕೂತು ಚರ್ಚೆ ಮಾಡುತ್ತೇವೆ ಎಂದ ಅವರು,

ಹಾನಗಲ್ ನಲ್ಲಿ ಸೂಟ್ ಕೇಸ್ ಕೆಲಸ ಮಾಡಿಲ್ಲ ಎಂಬ ಡಿಕೆಶಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ನಳೀನ್,

ಹಾಗಾದರೆ ಕನಕಪುರ ದಲ್ಲಿ ಡಿಕೆಶಿ ಗೆಲುವಿಗೆ ಸೂಟ್ ಕೇಸ್ ಕೆಲಸ ಮಾಡಿದ್ಯಾ ಎಂದು ಪ್ರಶ್ನೆ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

02/11/2021 03:34 pm

Cinque Terre

8.05 K

Cinque Terre

4

ಸಂಬಂಧಿತ ಸುದ್ದಿ