ಮುಲ್ಕಿ: ಕಿನ್ನಿಗೋಳಿ ಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ಕಿನ್ನಿಗೋಳಿ ಬಸ್ ನಿಲ್ದಾಣದಿಂದ ರೋಟರಿ ಭವನದ ವರೆಗೆ ಮಹಿಳೆಯರ ಸಬಲೀಕರಣ ಬೆಂಬಲಿಸಿ ಮತ್ತು ಭ್ರೂಣ ಹತ್ಯೆ ವಿರೋಧಿಸಿ "ಪಿಂಕ್ ವಾಕ್" ನಡೆಯಿತು.
ಸಮಾರೋಪದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರೇಣುಕಾ ಸ್ವರಾಜ್ ಶೆಟ್ಟಿ ಮಾತನಾಡಿ, ಮಹಿಳೆಯರು ಸಂಘಟಿತರಾಗಿ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡಬೇಕು ಎಂದರು.
ಸಿಸ್ಟರ್ ಅನಿತಾ, ರೇಣುಕಾ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಶಾಲೆಟ್ ಪಿಂಟೋ,ಅಂಬಿಕಾ ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಪದಕ ಹಾಗೂ ಪ್ರಮಾಣಪತ್ರ ನೀಡಲಾಯಿತು. ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಮಂಡಳಿಗಳ ಸದಸ್ಯರು ಹಾಗೂ ಇತರ ಮಹಿಳೆಯರು ಭಾಗವಹಿಸಿದ್ದರು.
Kshetra Samachara
31/10/2021 03:23 pm