ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಿಪಿಸಿಎಲ್ ಗ್ಯಾಸ್ ಸಿಲಿಂಡರ್ ಸಾಗಾಟ ಲಾರಿ ಚಾಲಕರ ಧರಣಿ

ಮಂಗಳೂರು: ಕಿಲೋ ಮೀಟರ್‌ಗೆ 7 ರೂ. ವೇತನ, ಬಿಪಿಸಿಎಲ್ ಘಟಕ ಹಾಗೂ ಗ್ಯಾಸ್ ಏಜೆನ್ಸಿಗಳ ಸಂಗ್ರಾಹಾರದಲ್ಲಿ ಚಾಲಕರಿಗೆ ವಿಶ್ರಾಂತಿ ತಾಣ, ಸಮಯಕ್ಕೆ ಸರಿಯಾಗಿ ಬಿಲ್ಲಿಂಗ್ ವ್ಯವಸ್ಥೆ ಸಹಿತ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಪಿಸಿಎಲ್ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಗಳ ಚಾಲಕರು ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಿಪಿಸಿಎಲ್ ಘಟಕದ ಎದುರು ಇಂದು ಧರಣಿ ನಡೆಸಿದರು.

ಸಿಐಟಿಯು ಸಂಯೋಜಿತ ಭಾರತ್ ಗ್ಯಾಸ್ ಲಾರಿ ಚಾಲಕರ ಸಂಘದ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಸಿಐಟಿಯು ಮುಖಂಡ ವಸಂತ ಆಚಾರಿ ಮಾತನಾಡಿ, 'ಅಗತ್ಯ ಸೇವೆಯಾದ ಗ್ಯಾಸ್ ಸಿಲಿಂಡರ್ ಸಾಗಾಟ ಲಾರಿ ಚಾಲಕ ವೃತ್ತಿ ಅತಿ ಜವಾಬ್ದಾರಿಯುತ ವೃತ್ತಿಯಾಗಿದ್ದು, ಚಾಲಕರಿಗೆ ನ್ಯಾಯಯುತ ಸವಲತ್ತು, ಹಕ್ಕು ಖಾತರಿ ಪಡಿಸುವುದು ಬಿಪಿಸಿಎಲ್ ಆಡಳಿತದ ಹೊಣೆ. ಆ ನಿಟ್ಟಿನಲ್ಲಿ ಚಾಲಕರು ಹಲವು ಬಾರಿ ಬೇಡಿಕೆ ಮುಂದಿಟ್ಟರೂ ಬಿಪಿಸಿಎಲ್ ಆಡಳಿತ ಪರಿಗಣಿಸದಿರುವುದು ವಿಷಾದನೀಯ ಎಂದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಯೂನಿಯನ್ ಪದಾಧಿಕಾರಿಗಳಾದ ಸುರೇಶ್, ಮುಹಮ್ಮದ್ ತಾಹಿರ್, ಫಾರೂಕ್, ಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

26/10/2021 03:33 pm

Cinque Terre

13.77 K

Cinque Terre

0

ಸಂಬಂಧಿತ ಸುದ್ದಿ