ಬಜಪೆ: ಮಂಗಳೂರು - ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿಯ ಆಗಲೀಕರಣಕ್ಕಾಗಿ ಎಡಪದವಿನ ಪಾಡ್ಯಾರ್ ಎಂಬಲ್ಲಿ ಮಿಕ್ಸಿಂಗ್ ಪ್ಲಾಂಟ್ ಸ್ಥಾಪನೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.ಸಂಬಂದಪಟ್ಟ ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರಿಗೆ ಯಾವುದೇ ಮಾಹಿತಿಯನ್ನು ನೀಡದೇ ಏಕಾ ಏಕಿ ಮಿಕ್ಸಿಂಗ್ ಪ್ಲಾಂಟ್ ನ ಸ್ಫಾಪನೆ ಗಾಗಿ ಜಾಗವನ್ನು ಸಮತಟ್ಟು ಮಾಡಿದ್ದಲ್ಲದೆ ಅನೇಕ ಮರಗಳನ್ನು ಕಡಿದು ಹಾಕಿದ್ದಾರೆ.ಈ ಬಗ್ಗೆ ಪಂಚಾಯತ್ ಗೆ ಕೂಡ ಮನವಿಯನ್ನು ನೀಡಲಾಗಿದ್ದು,ಗ್ರಾಮಸಭೆಯಲ್ಲೂ ಈ ಬಗ್ಗೆ ನಿರ್ಣಯವಾಗಿದೆ.ಪ್ಲಾಂಟ್ ಸ್ಥಾಪನೆ ಯಾದರೆ ಘನ ವಾಹನಗಳ ಸಂಚಾರದಿಂದ ಗ್ರಾಮಸ್ಥರಿಗೆ ಬಹಳಷ್ಟು ಸಮಸ್ಯೆ ಉಂಟಾಗಬಹುದು.ಈ ಭಾಗದ ರಸ್ತೆಗಳು ಇಕ್ಕಟಾಗಿದ್ದು,ಘನ ವಾಹನಗಳ ಸಂಚಾರದಿಂದ ಗ್ರಾಮಸ್ಥರು,ಹಿರಿಯ ನಾಗರೀಕರು ಹಾಗೂ ಶಾಲಾ ಮಕ್ಕಳ ಸಂಚಾರಕ್ಕೆ ತೊಡಕುಂಟಾಗುದರ ಜತೆಗೆ ಅಪಘಾತಗಳಿಗೂ ಕಾರಣವಾಗಬಹುದು .ಡಾಂಬರ್ ಮಿಕ್ಸಿಂಗ್ ನಿಂದ ಬರುವಂತಹ ಹೊಗೆಯಿಂದ ಪರಿಸರ ಮಾಲಿನ್ಯವಾಗಿ ವಿವಿಧ ಸಾಂಕ್ರಮಿಕ ರೋಗಗಳಿಗೆ ಕಾರಣವಾಗಬಹುದು.
ಪ್ಲಾಂಟ್ ಸ್ಥಾಪನೆಯ ಯ ಸಂದರ್ಭದಲ್ಲಿ ಕಾರ್ಮಿಕರಿಗಾಗಿ ಶೆಡ್ ನ್ನು ನಿರ್ಮಿಸಿ,ಶೆಡ್ ಗಳ ಡ್ರೈನೇಜ್ ನೀರು ಹರಿದು ಹೋಗಲು ಸ್ಥಳವಿಲ್ಲದಂತಾಗಬಹುದು .ನೀರಿನ ವ್ಯವಸ್ಥೆಗಾಗಿ ಸುಮಾರು 4 ರಿಂದ 5 ಕೊಳವೆ ಬಾವಿಗಳನ್ನು ಕೊರೆಯಲಾಗುದು ಎಂಬ ಮಾಹಿತಿ ಕೂಡ ಇದೆ.ಈಗಾಗಲೇ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು,ಇನ್ನು ಕೊಳವೆ ಬಾವಿ ನಿರ್ಮಾಣ ವಾದರೆ ನೀರಿನ ಸಮಸ್ಯೆಯನ್ನು ಹೇಳ ತೀರದು.ಸುತ್ತಮುತ್ತಲೂ ಕೃಷಿ ಪ್ರದೇಶವಿದೆ.ಕೇಂದ್ರ ಸರಕಾರದ ಯೋಜನೆಗೆ ವಿರೋದವಿಲ್ಲ.ಆದರೆ ಜನ ವಸತಿಗಳ ಪ್ರದೇಶಗಳ ಲ್ಲಿ ಇಂತಹ ಮಿಕ್ಸಿಂಗ್ ಪ್ಲಾಂಟ್ ಸ್ಥಾಪನೆ ಯಾಗುವುದು ಎಷ್ಟು ಸರಿ ಎಂದು ಗ್ರಾಮಸ್ಥ ಉದಯ ಪಾಡ್ಯಾರ್ ಅವರು ಹೇಳಿದರು.
ಈ ಬಗ್ಗೆ ಪ್ರತಿಕ್ರಯಿಸಿದ ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ ಅವರು ರಾಷ್ಟ್ರೀಯ ಹೆದ್ದಾರಿ ಆಗಲೀಕರಣ ಕಾಮಗಾರಿ ಅನಿವಾರ್ಯವಾಗಿದೆ.ಇದಕ್ಕಾಗಿ ಮಿಕ್ಸಿಂಗ್ ಪ್ಲಾಂಟ್ ಸ್ಥಾಪನೆಯಾಗಲಿದ್ದು, ಗ್ರಾಮಸ್ಥರಿಗೆ ಯಾವುದೇ ಸಮಸ್ಯೆಯಾಗದಂತೆ ಪ್ಲಾಂಟ್ ನ ಸ್ಥಾಪನೆ ಯಾಗಬೇಕು ಎಂದು ಹೇಳಿದರು.
Kshetra Samachara
05/10/2021 07:10 pm