ಕಾರ್ಕಳ: ಇಂದು ರೈತಪರ ಹೋರಾಟಗಾರರು ಕರೆನೀಡಿರುವ ಭಾರತ್ ಬಂದ್ ಗೆ ಬೆಂಬಲರಾರ್ಥವಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಕಿಸಾನ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಕಳ ಬೈಪಾಸ್ ವ್ರತ್ತದಲ್ಲಿ ರಸ್ತೆ ತಡೆ ಮತ್ತು ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಕಿಸಾನ್ ಸಮಿತಿ ಅಧ್ಯಕ್ಷರಾದ ಉದಯ ವಿ ಶೆಟ್ಟಿಯವರು ಮಾತನಾಡಿ ರೈತ ದೇಶದ ಬೆನ್ನೆಲುಬು ಆದರೆ ಕೇಂದ್ರ ಸರಕಾರ ರೈತರ ಬೆನ್ನನ್ನೇ ಮುರಿಯುವ ಕೆಲಸವನ್ನು ಮಾಡುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಶಾಂತ್ ಸುಧಾಕರ್ ರವರು ಮಾತನಾಡಿ ಕೇಂದ್ರ ಸರಕಾರವು ಕೃಷಿ ಉಪಕರಣಗಳಿಗೆ ರಸಗೊಬ್ಬರಗಳಿಗೆ ಜಿಎಸ್ ಟಿ ಜಾಸ್ತಿ ಮಾಡಿ ಬೆಲೆ ಏರಿಕೆ ಮಾಡಿದ್ದಾರೆ ಹಾಗೆಯೇ ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿ ಸೆಸ್ (CESS) ಮೂಲಕ ಹಲವಾರು ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹ ಮಾಡಿದರೂ ಸಹಿತ ರೈತರ ಸಾಲವನ್ನು ಮನ್ನಾ ಮಾಡಲಿಲ್ಲ ಅದರೆ ಬಂಡವಾಳಶಾಹಿಗಳ ಸುಮಾರು ಎಂಟು ಲಕ್ಷ ಕೋಟಿಗಳಿಗಿಂತಲೂ ಹೆಚ್ಚು ಸಾಲವನ್ನು ಮನ್ನಾ ಮಾಡಿದೆ ಎಂದರು ಬಿಪಿನ್ ಚಂದ್ರಪಾಲ್ ರವರು ಸಂದರ್ಭೋಚಿತವಾಗಿ ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ, ಕೆ.ಪಿ.ಸಿ.ಸಿ ಸಂಯೋಜಕರು ಹಾಗು ಜಿಲ್ಲಾ ಪ್ರಚಾರ ಸಮಿತಿಯ ಸಂಚಾಲಕರಾದ ಬಿ.ಕೃಷ್ಣಮೂರ್ತಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಕೋಟ್ಯಾನ್ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆಯಾದ ಮಾಲಿನಿ ರೈ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಿಸಾನ್ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಕಾಶ್ ಪೂಜಾರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಅನಿತಾ ಡಿಸೋಜ, ಪ್ರಧಾನ ಕಾರ್ಯದರ್ಶಿ ಅಶ್ಫಾಕ್ ಆಹ್ಮಮದ್ ಬ್ಲಾಕ್ ಕಾಂಗ್ರೆಸ್ ಕಾನೂನು ಸಮಿತಿಯ ಅಧ್ಯಕ್ಷರಾದ ರೆಹಮತುಲ್ಲಾ ಎಸ್ ಸಿ ಸಮಿತಿಯ ಅಣ್ಣಪ್ಪ ನಕ್ರೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕರಾದ ರಾಜೇಂದ್ರ ದೇವಾಡಿಗ ಥೋಮಸ್ ಮಸ್ಕರೇನಸ್ ರಮೇಶ್ ಶೆಟ್ಟಿ ರೆಂಜಾಳ, ಜಯರಾಮ ಆಚಾರ್ಯ, ಅಮಿತಾ ಶೆಟ್ಟಿ, ಸುನಿಲ್ ಕೋಟ್ಯಾನ್, ವಿವೇಕಾನಂದ ಶೆಣೈ ಪುರಸಭಾ ಸದಸ್ಯೆ ಪ್ರತಿಮಾ ಮಾಜಿ ಪುರಸಭಾ ಅಧ್ಯಕ್ಷರಾದ ಸುಭೀತ್ ಎನ್ ಆರ್ ಮಾಜಿ ಪುರಸಭಾ ಸದಸ್ಯರಾದ ನವೀನ್ ದೇವಾಡಿಗ ಫ್ರಾನ್ಸಿಸ್ ಬೆಳ್ಮಣ್ ಅಬ್ದುಲ್ಲಾ ಶೇಕ್ ಆದಂ ಸುನಿಲ್ ಕುಮಾರ್ ಭಂಡಾರಿ ಹೆನ್ರಿ ಪ್ರಶಾಂತ್ ಆಚಾರ್ಯ ಡಯಾಸ್ ಸಿರಿಯಾನ್ ಸತೀಶ್ ಹಿರಿಯ ಕಾಂಗ್ರೆಸಿಗರಾದ ಸಾಣೂರು ಸುಂದರ ಗೌಡ, ಬಶೀರ್ ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಸಂಚಾಲಕರಾದ ಸತೀಶ್ ಕಾರ್ಕಳ, ಉಪಸ್ಥಿತರಿದ್ದರು ಬ್ಲಾಕ್ ಕಾಂಗ್ರೆಸ್ ವಕ್ತಾರ ಹಾಗು ಪುರಸಭಾ ಸದಸ್ಯರಾದ ಶುಭದ ರಾವ್ ಸ್ವಾಗತಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಧನ್ಯವಾದವಿತ್ತು ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
27/09/2021 03:29 pm