ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆಯಾದ ಕಿಲ್ಪಾಡಿ ಗ್ರಾ ಪಂ. ನ್ನು ಅಂತಿಮ ಆಯ್ಕೆಯಿಂದ ಕೈಬಿಟ್ಟ ಬಗ್ಗೆ ಆಕ್ರೋಶ, ಪ್ರತಿಭಟನೆ ಎಚ್ಚರಿಕೆ

ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಗ್ರಾಮ ಪಂಚಾಯತ್ 2020 21 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಆದರೆ ಅಂತಿಮ ಹಂತದಲ್ಲಿ ಏಕಾಏಕಿ ಕೈಬಿಟ್ಟಿರುವ ಬಗ್ಗೆ ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ ಪಡಂಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಮಾಧ್ಯಮದೊಂದಿಗೆ ಮಾತನಾಡಿ 2020 21 ನೇ ಸಾಲಿನ ಗಾಂಧಿ ಗ್ರಾಮದ ಪುರಸ್ಕಾರಕ್ಕೆ ಸಂಬಂಧಪಟ್ಟಂತೆ ಕಿಲ್ಪಾಡಿ ಪಂಚಾಯಿತಿಯನ್ನು ಉಲ್ಲೇಖ ( 1) ರಂತೆ ಸೆಪ್ಟೆಂಬರ್ 15ರಂದು ಆಯ್ಕೆ ಮಾಡಿ ಸಾರ್ವಜನಿಕರಿಂದ ಆಕ್ಷೇಪಣೆಗೆ ಕರೆಯಲಾಗಿತ್ತು. ಆದರೆ ಸೆಪ್ಟೆಂಬರ್ 19ರಂದು ಏಕಾಏಕಿ ಮಾಧ್ಯಮವೊಂದರ ಮುಖಾಂತರ ಮಂಗಳೂರು ತಾಲೂಕಿನ ಮುನ್ನೂರು ಗ್ರಾಮ ಗಾಂಧಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂಬ ಸುದ್ದಿ ತಿಳಿದು ಬಂದಿದ್ದು ಈ ಬಗ್ಗೆ ಕಿಲ್ಪಾಡಿ ಪಂಚಾಯಿತಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಮಾತನಾಡಿ ಕಿಲ್ಪಾಡಿ ಗ್ರಾಮ ಪಂಚಾಯಿತಿಯನ್ನು ಗಾಂಧಿ ಪುರಸ್ಕಾರಕ್ಕೆ ಕೈಬಿಟ್ಟು ಏಕಾಏಕಿ ಮುನ್ನೂರು ಗ್ರಾಮವನ್ನು ಆಯ್ಕೆ ಮಾಡಿದ ಬಗ್ಗೆ ಕಿಲ್ಪಾಡಿ ಗ್ರಾಪಂ ಆಡಳಿತಕ್ಕೆ ಪತ್ರ ವ್ಯವಹಾರವಾಗಲಿ ಅಥವಾ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ, ಅಲ್ಲದೆ ಏಕಾಏಕಿ ಅಧಿಕಾರಿಗಳ ಈ ನಡೆಯ ಬಗ್ಗೆ ರಾಜಕೀಯ ಪ್ರಭಾವ ಕಂಡುಬರುತ್ತಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.

ಕಿಲ್ಪಾಡಿ ಪಂಚಾಯಿತಿಯನ್ನು ಸಣ್ಣ ಪಂಚಾಯಿತಿ ಎಂದು ಪರಿಗಣಿಸಿ ಆಯ್ಕೆಯಿಂದ ಹೊರಗಿಟ್ಟಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗೋಪಿನಾಥ ಪಡಂಗ ಆಯ್ಕೆಯಲ್ಲಿ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿದ್ದು ಸ್ಪಷ್ಟನೆ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

Edited By : Shivu K
Kshetra Samachara

Kshetra Samachara

20/09/2021 07:36 pm

Cinque Terre

5.29 K

Cinque Terre

0

ಸಂಬಂಧಿತ ಸುದ್ದಿ