ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ವಿಶ್ವಕರ್ಮ ದಿನಾಚರಣೆ

ಬಂಟ್ವಾಳ: ವಿಶ್ವಗುರು ವಿಶ್ವಕರ್ಮ ಅವರು ದ್ವಾರಕಾ ನಗರವನ್ನು ನಿರ್ಮಿಸಿಕೊಟ್ಟ ಪುಣ್ಯ ದಿನವನ್ನುವಿಶ್ವಕರ್ಮ ದಿನವಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ ಎಂದು ಎಸ್.ವಿ.ಎಸ್. ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ಮುರಳೀಧರ ಆಚಾರ್ಯರು ಹೇಳಿದರು.

ಬಂಟ್ವಾಳ ಬಿಜೆಪಿ ಓಬಿಸಿ ಮೋರ್ಚಾ ಏರ್ಪಡಿಸಿದ ವಿಶ್ವಕರ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಅವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಮಂಡಲ ಬಿಜೆಪಿ ಓಬಿಸಿ ಮೋರ್ಚಾದ ಅಧ್ಯಕ್ಷರಾದ ಆನಂದ ಶಂಭೂರು ವಹಿಸಿಕೊಂಡಿದ್ದರು.

ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಚಿದಾನಂದ ರೈ, ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಓಬಿಸಿ ಮೋರ್ಚಾದ ಮಂಡಲ ಪ್ರಭಾರಿ ಪ್ರಕಾಶ್ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಮಂಡಲ ಕಾರ್ಯದರ್ಶಿ ರಮಾನಾಥ ರಾಯಿ ಜಿಲ್ಲಾ ಓಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಪುರುಷೋತ್ತಮ ಭಾಗವಹಿಸಿದ್ದರು. ಮಂಡಲ ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ಅರಳ ಸ್ವಾಗತಿಸಿ, ಕಾರ್ಯದರ್ಶಿ ಮೋಹನದಾಸ್ ಕೊಠಾರಿ ವಂದಿಸಿದರು. ರಮೇಶ್ ಪುರೋಹಿತರು ಪ್ರಾರ್ಥನಾ ಶ್ಲೋಕ ಹೇಳಿದರು.

Edited By : PublicNext Desk
Kshetra Samachara

Kshetra Samachara

17/09/2021 08:10 pm

Cinque Terre

2.68 K

Cinque Terre

0

ಸಂಬಂಧಿತ ಸುದ್ದಿ