ಉಡುಪಿ: ಸಾರ್ವಜನಿಕ ಗಣೇಶೋತ್ಸವ ಆಚರಣೆ ವಿಚಾರವಾಗಿ ಇವತ್ತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್,
ಗಣೇಶೋತ್ಸವವನ್ನು ಕಳೆದ ವರ್ಷವೂ ವಿಜೃಂಭಣೆಯಿಲ್ಲದೆ ಆಚರಣೆ ಮಾಡಿದ್ದೇವೆ. ಕೋವಿಡ್ ನ ಈ ಸಮಯದಲ್ಲಿ ಮೆರವಣಿಗೆ ಅಪೇಕ್ಷೆ ಸರಿಯಲ್ಲ.
ಶಾಸ್ತ್ರೋಕ್ತವಾಗಿ ಗಣೇಶನ ಮೂರ್ತಿ ಇಟ್ಟು ಪೂಜೆಗೆ ಅನುಮತಿ ಸಿಗುತ್ತದೆ. ಸರ್ಕಾರ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡುತ್ತದೆ.
ಗಣೇಶೋತ್ಸವ ಆಚರಣೆಗೆ ಅನುಮತಿ ಸಿಗುವ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Kshetra Samachara
01/09/2021 02:16 pm